ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಟ್ರಸ್ಟ್‌ನಿಂದ ಸಾಮೂಹಿಕ ವಿವಾಹ

Published on

ಮೈಸೂರು: ಪುನೀತ್ ರಾಜ್‌ಕುಮಾರ್ ಸಮಾಜ ಸೇವಾ ಟ್ರಸ್ಟ್‌ನಿಂದ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ಮಾ.23ರಂದು ನಗರದ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎನ್.ರಾಜು ತಿಳಿಸಿದರು.

ಸಂಪೂರ್ಣ ಉಚಿತ ಕಾರ್ಯಕ್ರಮವಾಗಿದ್ದು, ವಧು ವರರಿಗೆ ತಾಳಿ, ಕಾಲುಂಗುರ ಮೊದಲಾದವನ್ನು ನೀಡಲಾಗುವುದು. ಜತೆಗೆ ಬಂದವರಿಗೆ ಊಟದ ವ್ಯವಸ್ಥೆಯಿದೆ. ಪ್ರಯೋಜನ ಪಡೆಯಲಿಚ್ಛಿಸುವವರು ದೂ.94487 87111 ಸಂಪರ್ಕಿಸಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಟ್ರಸ್ಟ್ ಸಲಹೆಗಾರ ಸೂರ್ಯಕುಮಾರ್ ಮಾತನಾಡಿ, ಟ್ರಸ್ಟ್ ಪ್ರತಿ ವರ್ಷ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಕಿವುಡ ಮೂಕ ಮಕ್ಕಳಿಗೆ ಪುಸ್ತಕ, ಅಂಗವಿಕಲ ಮಕ್ಕಳಿಗೆ ನೆರವು ನೀಡುವ ಕೆಲಸ ಮಾಡುತ್ತಿದೆ. ಅದೇ ರೀತಿ ಈ ಬಾರಿ ಉಚಿತ ವಿವಾಹ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net