ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ

ಆಲ್ದಾಳ ಗ್ರಾಮದ ಭದ್ರಕಾಳಿ ವೀರಭದ್ರೇಶ್ವರ ದೇವಸ್ಥಾನದಲ್ಲಿ 11 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.
ಆಲ್ದಾಳ ಗ್ರಾಮದ ಭದ್ರಕಾಳಿ ವೀರಭದ್ರೇಶ್ವರ ದೇವಸ್ಥಾನದಲ್ಲಿ 11 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.
Published on

ಮಾನ್ವಿ: ಮದುವೆಗಾಗಿ ಸಾಲ ಮಾಡುವುದಕ್ಕಿಂತ ಸಾಮೂಹಿಕ ವಿವಾಹಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ದುಂದು ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಕಲ್ಮಠದ ಪಂಡಿತ ವಿರೂಪಾಕ್ಷೇಶ್ವರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಆಲ್ದಾಳ ಗ್ರಾಮದ ಭದ್ರಕಾಳಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ 11 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಲ್ದಾಳದಲ್ಲಿ ಪ್ರತಿ ವರ್ಷ ಬಡವರ ಅನುಕೂಲಕ್ಕಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತಿರುವುದು ಶ್ಲಾಘನೀಯ. ಆಡಂಬರದ ಮದುವೆಗಿಂತ ಸಾಮೂಹಿಕ ವಿವಾಹ ಅನುಕೂಲ ಎಂದರು. ದೇವಸ್ಥಾನದಲ್ಲಿ ಬೆಳಗ್ಗೆ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ಮಹಾಮಂಗಳಾರಾತಿ ಜರುಗಿತು.

ನಿಲೋಗಲ್ ಪಂಚಾಕ್ಷರಿ ಶಿವಾಚಾರ್ಯರು, ಚೀಕಲಪರ್ವಿ ರುದ್ರಮುನೇಶ್ವರ ಮಠದ ಸದಾಶಿವ ಸ್ವಾಮೀಜಿ, ಕರೇಗುಡ್ಡ ಮಹಾಂತ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಲಾಳಗೊಂಡ ಸಮಾಜದ ಜಿಲ್ಲಾ ಅಧ್ಯಕ್ಷ ಆಲ್ದಾಳ ವೀರಭದ್ರಪ್ಪಗೌಡ, ಪ್ರಮುಖರಾದ ಶಂಕ್ರಪ್ಪ ಸಾಹುಕಾರ, ದೇವರಾಜ ಸ್ವಾಮಿ, ಮಲ್ಲಪ್ಪಗೌಡ, ಆಲ್ದಾಳ ಸಿದ್ದಪ್ಪಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net