

ವಿಜಯವಾಣಿ ಸುದ್ದಿಜಾಲ ಗದಗ
ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದಿದ್ದರೆ ಮುಂದಿನ ದಿನಗಳಲ್ಲಿ ಮಕ್ಕಳು ತಪು$್ಪ ದಾರಿ ಹಿಡಿಯುತ್ತಾರೆ. ಅದಕ್ಕೆ ಪಾಲಕರೇ ಕಾರಣ ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು ಹೇಳಿದರು.
ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ಚಿಕೇನಕೊಪ್ಪದ ಶ್ರೀ ಚನ್ನವಿರ ಶರಣರ ಮಠದಲ್ಲಿ ಬುಧವಾರ ಜರುಗಿದ 29ನೇ ವರ್ಷದ ಕಲಬುಗಿರ್ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿದ್ಯ ವಹಿಸಿ ಮಾತನಾಡಿ, ಹಿಂದೆ ಹೆಚ್ಚು ವಿದ್ಯಾವಂತರಿದ್ದರೆ ಅವರಿಗೆ ಉನ್ನತ ಹುದ್ದೆ ಪಡೆಯಲಿ ಎಂದು ದೂರದ ಊರಿಗೆ ಕಳುಹಿಸುತ್ತಿದ್ದರು. ಮಧ್ಯಮ ಶಿಣ ಪಡೆದವರಿಗೆ ಕೃಷಿ ಕೆಲಸಕ್ಕೆ ಕಳುಹಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಅತೀ ಹೆಚ್ಚು ವಿದ್ಯಾವಂತರಾದವರು ಕೃಷಿಯಲ್ಲಿ ಹೊಸ ಸಾಧನೆ ಮಾಡುತ್ತಿರುವುದರಿಂದ ಕೃಷಿಗೆ ಸಾಕಷ್ಟು ಮಹತ್ವ ಬಂದಿದೆ. ರೈತರಿಗೆ ನಿಜವಾದ ಸಂಪತ್ತು ಎಂದರೆ ಮನೆಯಲ್ಲಿ ದನಗಳ ಸಾಲು, ಕಟ್ಟಿಮೆಲೆ ಧವಸಾಧಾನ್ಯಗಳ ನಿಟ್ಟು, ಅಡುಗೆ ಮನೆಯಲ್ಲಿ ಹಾಲಿನ ಗಡಗಿ, ಹಿತ್ತಲದಲ್ಲಿ ಮೇವಿನ ಬಣವಿ, ಹೊಲದೊಳಗೆ ಒಡ್ಡು ಇವುಗಳನ್ನು ನೋಡಿ ರೈತರ ಸಂಪತ್ತ್ತನ್ನು ಅಳಿಯುತ್ತಿದ್ದರು. ಈಗ ಕಾಲ ಬದಲಾಗಿ ಎಲ್ಲವು ಮಾಯವಾಗಿದೆ ಎಂದು ಹೇಳಿದರು.
ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಅಪರೂಪವಾಗಿರುವ ಮನುಷ್ಯ ಜನ್ಮದಲ್ಲಿ ನಾವು ಜನಿಸಿರುವದರಿಂದ ಮಕ್ಕಳಿಗೆ ಉತ್ತಮ ಶಿಣ, ಪರಿಸರ ಪ್ರೇಮ ಹಾಗೂ ಸಂಸ್ಕಾರ ನೀಡಬೇಕು. ಪಾಲಕರಿಗೆ ಎನೇ ಕಷ್ಟ ಬರಲಿ ಮಕ್ಕಳಿಗೆ ಶಿಣ ನೀಡಿದರೆ ಅವರು ಸ್ವಾಭಿಮಾನಿಗಳಾಗಿ ಬದಕಲು ಕಲೆಯುತ್ತಾರೆ. ಪಾಲಕರು ಆಸ್ತಿ ಗಳಿಸಲು ಯೋಚಿಸದೆ ಮಕ್ಕಳನ್ನು ಆಸ್ತಿಗಳನ್ನಾಗಿ ಮಾಡಬೇಕು. ವಿದ್ಯಾಥಿರ್ಗಳ ಜೀವನದಲ್ಲಿ ಶಿಣ ಪ್ರಮುಖ ಪಾತ್ರವಹಿಸುತ್ತದೆ. ಶಾಲೆಗಳು ಶಿಣ ಕಲಿಸುತ್ತದೆ ಪಾಲಕರು ಸಂಸ್ಕಾರ ಕಲಿಸಬೇಕು. ಮಕ್ಕಳು ಹೇಳಿದ್ದನ್ನು ಕೇಳುವದಿಲ್ಲ, ಮಾಡಿದ್ದನ್ನು ಕಲಿಯುತ್ತವೆ. ಅದ್ದರಿಂದ ಮನೆಯಿಂದ ಸಂಸ್ಕಾರ ಆರಂಭವಾಬೇಕು. ಇಂದಿನ ದಿನಗಳಲ್ಲಿ ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠವಾಗಿದೆ ಎಂದು ಹೇಳಿದರು.
ಜಂತ್ಲಿ ಶಿರೂರಿನ ಶಿವಶಾಂತವೀರ ಶರಣರು ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ದಂಪತಿಗಳು ಗುರು ಹಿರಿಯರನ್ನು ಗೌರವಿಸಿ ಆದರ್ಶ ಜೀವನ ನಡೆಸಬೇಕು. ಒಂದು ಮನೆಯಿಂದ ಇನ್ನೊಂದು ಮನೆಯ ಬೆಳಕಾಗಿ ಬಂದಿರುವ ಸತಿಯನ್ನು ಕುಟುಂಬದವರು ಮಗಳಿಗಿಂತ ಹೆಚ್ಚಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 24 ಜೋಡಿ ಸಾಮೂಹಿಕ ವಿವಾಹಗಳು ಜರುಗಿದವು. ತಿಂಗಳವರೆಗೆ ಪುರಾಣ ಪ್ರವಚನ ಮಾಡಿದ ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಸಿದ್ದಾಪೂರ ಅವರನ್ನು ಸನ್ಮಾನಿಸಲಾಯಿತು.
ಕಣಗಿನಹಾಳ, ಜಂತ್ಲಿ ಶಿರೂರ ಧರ್ಮರಮಠದ ಧರ್ಮರಾಜ ಅಜ್ಜನವರು, ಮಿಥುನ ಪಾಟೀಲ, ವೆಂಕಟೇಶ ಕುಲಕಣಿರ್, ಗವಿಸಿದ್ದಯ್ಯ ಹಳ್ಳಿಕೇರಿಮಠ, ಹೇಮಣ್ಣ ಪೂಜಾರ, ಹೊಂಬಳ, ಗ್ರಾಮ ಪಂಚಾಯತ ಅಧ್ಯ ಹಾಗೂ ಸದಸ್ಯರು ಇದ್ದರು.