

ಮಂಡ್ಯ: ನಗರದ ಬಾಲಗಂಗಾಧರನಾಥ ಸಮುದಾಯದ ಭವನದಲ್ಲಿ ಶುಕ್ರವಾರ ಜಿಲ್ಲಾ ಚುಂಚಶ್ರೀ ಮಹಿಳಾ ಒಕ್ಕಲಿಗರ ಮಹಾಲಕ್ಷ್ಮೀ ವೇದಿಕೆ ವತಿಯಿಂದ ಸಾಮೂಹಿಕ ಮಹಾಲಕ್ಷ್ಮೀ ಮತ್ತು ಆಷಾಢಮಾಸದ ಪೂಜಾ ಮಹೋತ್ಸವ ನಡೆಯಿತು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪುರುಷೋತ್ತಮಾನಂದನಾಥ ಸ್ವಾಮೀಜಿ ಹಾಗೂ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗಣಪತಿ ಪೂಜೆ, ಮಹಾಲಕ್ಷ್ಮೀ, ಸಹಸ್ರನಾಮ, ಪೂರ್ವಕ ಕುಂಕುಮಾರ್ಚನೆ, ಅಷ್ಟೋತ್ತರಶತನಾಮ, ಲಕ್ವಾರ್ಚನೆ, ಪುಷ್ಪಾರ್ಚನೆ ಸಂಕಲ್ಪವಾಷನ ಪೂಜಾ ಕಾರ್ಯಕ್ರಮ ನೇರವೇರಿತು. 500ಕ್ಕೂ ಹೆಚ್ಚು ಮಹಿಳೆಯರು ಅಷಾಢಮಾಸದ ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಮಹಿಳಾ ಒಕ್ಕಲಿಗರ ವೇದಿಕೆ ಸುಮಾರು 5 ವರ್ಷಗಳಿಂದ ಮಹಾಲಕ್ಷ್ಮೀ ಮತ್ತು ಪೂಜಾ ಕಾರ್ಯವನ್ನು ನಡೆಸುತ್ತಿದ್ದಾರೆ. ಆಷಾಢಮಾಸದ ಶುಕ್ರವಾರ ತುಂಬಾ ಶೇಷ್ಟವಾಗಿದೆ. ಇತ್ತೀಚೆಗೆ ಇಂತಹ ಪೂಜಾ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದೆ. ಆದ್ದರಿಂದ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದರ ಜತೆಗೆ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂಬ ಕಾರಣಕ್ಕೆ ಈ ಪೂಜಾ ಕಾರ್ಯಕ್ರಮ ಹಮ್ಮಿಕೊಳಲಾಗಿದೆ ಎಂದು ಹೇಳಿದರು.
ವೇದಿಕೆ ಮಂಜುಳಾ ಶಿವಣ್ಣ, ಲತಾ, ಮಂಜುಳಾ, ಹೇಮಲತಾ, ನಂದಿನಿ, ಸುಮಿಗೌಡ, ನಾಗಲಕ್ಷ್ಮೀ, ಸರಸ್ವತಿ ಇತರರಿದ್ದರು.