

ಮೈಸೂರು: ನಗರದ ಕಾಳಿದಾಸ ರಸ್ತೆಯಲ್ಲಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಪೀಠಾಧಿಪತಿ ಶ್ರೀಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ಸಾಮೂಹಿಕ ಉಚಿತ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆಯ ಭಿತ್ತಿಪತ್ರ ಅನಾವರಣಗೊಳಿಸಿದರು.
ಕೆಎಂಪಿಕೆ ಟ್ರಸ್ಟ್‌ನಿಂದ ಫೆ.14ರಂದು ವಿಶ್ವೇಶ್ವರ ನಗರ ಇಂಡಸ್ಟ್ರಿಯಲ್ ಸಬರ್ಬ್‌ನಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಸಾಮೂಹಿಕ ಉಚಿತ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಆಯೋಜಿಸಲಾಗಿದೆ.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಫೆ.14ರಂದು ಬೆಳಗ್ಗೆ 8 ರಿಂದ 10.30 ರವರೆಗೆ ಎಲ್ಲ ಜನಾಂಗದವರಿಗೂ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ನಡೆಯಲಿದೆ. ಅಕ್ಷರಭ್ಯಾಸವನ್ನು ಮಾಡಲಿಚ್ಛಿಸುವ ಮಕ್ಕಳ ಪಾಲಕರು ಮೊ: 9880752727, 7829067769 ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.
ಅಕ್ಷರಭ್ಯಾಸ ಮಾಡಿಸುವವರ ಸ್ಲೇಟ್-ಬಳಪವನ್ನು ನಮ್ಮ ಟ್ರಸ್ಟ್‌ನಿಂದ ಉಚಿತವಾಗಿ ಪ್ರಸಾದ ರೂಪದಲ್ಲಿ ನೀಡಲಾಗುವುದು. ಆದ್ದರಿಂದ ಪ್ರತ್ಯೇಕವಾಗಿ ತರುವ ಅಗತ್ಯವಿರುವುದಿಲ್ಲ. ಫೆ.13ರಂದು ನೋಂದಣಿಗೆ ಕಡೆಯ ದಿನವಾಗಿದೆ ಎಂದು ತಿಳಿಸಿದರು.
ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನದ ಪ್ರಥಮ ಸ್ಥಾನಿಕರು ಕೆ.ಎಸ್.ನಾರಾಯಣ ಅಯ್ಯಂಗಾರ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ.ಆರ್.ಯೋಗನರಸಿಂಹನ್(ಮುರಳಿ), ಪುಟ್ಟಸ್ವಾಮಿ, ಎಚ್‌ವಿಎಲ್ಎನ್ ಆಚಾರ್, ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ ಇತರರು ಇದ್ದರು.