ಮಾಸ್ ಅಡಕೆ ಗೋದಾಮಿಗೆ ಹಾನಿ

mng-16june-mass
Published on



ಮಂಗಳೂರು : ಬೈಕಂಪಾಡಿಯ ಎಪಿಎಂಸಿ ಪ್ರಾಂಗಣದ ಒಳಗಿರುವ ಮಾಸ್ ನಿಯಮಿತ ಸಂಸ್ಥೆಗೆ ಸೇರಿದ ಅಡಕೆ ಗೋದಾಮಿನ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿದೆ. ಮೇಲ್ಛಾವಣಿಗೆ ಮರದ ಟೊಂಗೆಗಳು ಬಿದ್ದ ಪರಿಣಾಮ ಗೋದಾಮಿನೊಳಗೆ ಮಳೆ ನೀರು ನುಗ್ಗಿ 1.50 ಕೋಟಿ ರೂ.ಮೌಲ್ಯದ ಅಂದಾಜು 300ರಿಂದ 350 ಕ್ವಿಂಟಾಲ್ಅಡಕೆ ಹಾನಿಗೀಡಾಗಿವೆ.
ಭಾನುವಾರ ಸಾಯಂಕಾಲ ಎದ್ದ ಭಾರೀ ಸುಂಟರ ಗಾಳಿಗೆ ಸುತ್ತಮುತ್ತಲಿನ ಮರಗಳು ಗೋದಾಮಿನ ಮೇಲೆ ಬಿದ್ದಿದ್ದು
ಮೇಲ್ಛಾವಣಿಯ ಶೀಟ್‌ಗಳು ಪುಡಿಯಾಗಿವೆ. ಧಾರಾಕಾರ ಮಳೆ ಸುರಿದ ಕಾರಣ ಗೋದಾಮಿಗೆ ನೆರೆ ನೀರು ನುಗ್ಗಿದೆ. ಗೋದಾಮಿನಲ್ಲಿ ಭಾರೀ ಪ್ರಮಾಣದಲ್ಲಿ ಸಂಸ್ಕರಿಸಿದ ಅಡಿಕೆಗಳನ್ನು ಮಾರಾಟಕ್ಕೆ ಶೇಖರಿಸಿಡಲಾಗಿತ್ತು. ಮಳೆಗೆ ಅಡಿಕೆ ಸಂಸ್ಕರಣಾ ಯಂತ್ರವೂ ಹಾನಿಗೀಡಾಗಿದೆ. ಎಪಿಎಂಸಿ ಪ್ರಾಂಗಣದಲ್ಲಿ 50ಕ್ಕೂ ಮಿಕ್ಕಿ ಬೃಹತ್ ಮರಗಳು ಧರಾಶಾಹಿಯಾಗಿದ್ದು, ಮರದ ಟೊಂಗೆಗಳು ಬಹುದೂರ ಹಾರಿ ಬಿದ್ದಿದ್ದು ಗಾಳಿಯ ರಭಸಕ್ಕೆ ಸಾಕ್ಷಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net