ಮೂಡು ಮಠದಲ್ಲಿ ಸಾಮೂಹಿಕ ಗಾಯತ್ರೀ ಜಪ

Kin_Japa
Published on

ಕಟೀಲು: ಅಖಿಲ ಕರ್ನಾಟಕ ಬ್ರಾಹ್ಮಣ ಸಂಘ, ಬೆಂಗಳೂರು ಸಹಾಭಾಗಿತ್ವದಲ್ಲಿ ಅಕ್ಟೋಬರ್‌ನಲ್ಲಿ ಚಿತ್ರಾಪುರ ಮಠದಲ್ಲಿ ನಡೆಯಲಿರುವ ಕೋಟಿ ಗಾಯತ್ರೀ ಜಪ ಯಜ್ಞದ ಪೂರ್ವಭಾವಿಯಾಗಿ ಶಿವಳ್ಳಿ ಸ್ಪಂದನ ಕಟೀಲು ವಲಯದ ಅಷ್ಟ ಮಠಗಳಲ್ಲಿ ಒಂದಾದ ಶಿಬರೂರು ಮೂಡು ಮಠದಲ್ಲಿ ಮೂರನೇ ವಾರದ ಸಾಮೂಹಿಕ ಗಾಯತ್ರೀ ಜಪಾನುಷ್ಠಾನ ಊರಿನ ಎಲ್ಲ ಹಿರಿಯರ, ಸದಸ್ಯರ ಕೂಡುವಿಕೆಯಿಂದ ನಡೆಯಿತು.

ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಚಾರ್ಯ ಲನ್ಯಾಸ ಮಾಡಿ, ಗಾಯತ್ರೀ ಜಪದ ಮೂಲಕ ಲೋಕದ ಸಮಸ್ತ ಜನರಿಗೆ ಶುಭಹಾರೈಸಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಭಾ ರಾಜ್ಯ ಸಂಚಾಲಕರ ಕೊರಿಯರ್ ಸುಬ್ರಹ್ಮಣ್ಯ ಪ್ರಸಾದ್, ಅಧ್ಯಕ್ಷ ಅನಂತ ಪದ್ಮನಾಭ ಆಚಾರ್ಯ, ಕುಲ್ಲಂಗಳ್ ಅನಂತ ಭಟ್, ವೆಂಕಟರಮಣ ಆಚಾರ್ಯ ಡಾ.ಗುರುರಾಜ ಉಡುಪ, ಶಿವಪ್ರಸಾದ್, ಸುನೀಲ್ ಭಟ್ ತಾಳಿಪಡಿ, ರಾಘವೇಂದ್ರ ಭಟ್ ನೆಜಾರು, ಯುವಘಟಕ, ಮಹಿಳಾ ಘಟಕದ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net