ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು?

SSLC Exam '
ಸಾಂದರ್ಭಿಕ ಚಿತ್ರ
Published on

| ವೇಣುವಿನೋದ್ ಕೆ.ಎಸ್. ಮಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತಿಮ ಹಂತದಲ್ಲಿದೆ. ಈ ಬಾರಿ ಮೌಲ್ಯಮಾಪನಕ್ಕೆ ಸಿಕ್ಕಿರುವ ಚಿಕ್ಕೋಡಿಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ನೋಡಿದಾಗ ಸಾಮೂಹಿಕ ನಕಲು ನಡೆದಿರುವ ಬಗ್ಗೆ ಸಂಶಯ ವ್ಯಕ್ತವಾಗತೊಡಗಿದೆ. ಉತ್ತರ ಪತ್ರಿಕೆಗಳ ಜತೆಗೆ ಉತ್ತರಗಳನ್ನು ಬರೆದಿರá-ವ ಜೆರಾಕ್ಸ್ ಸಿಕ್ಕಿರá-ವ ಕಾರಣ ಪ್ರಶ್ನೆಪತ್ರಿಕೆ ಸೋರಿಕೆಯಾಗಿರá-ವ ಬಗ್ಗೆಯೂ ಅನá-ಮಾನಗಳಿವೆ. ದ.ಕ. ಜಿಲ್ಲೆಗೆ ಚಿಕ್ಕೋಡಿ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಗಳ ಉತ್ತರಪತ್ರಿಕೆಗಳು ಮೌಲ್ಯಮಾಪನಕ್ಕಾಗಿ ಬಂದಿವೆ. ಏ.23ರಂದು ಮೌಲ್ಯಮಾಪನ ಶುರುವಾಗಿದ್ದು, ಇನ್ನೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಕೋರ್ ವಿಷಯಗಳಾದ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಉತ್ತರ ಪತ್ರಿಕೆಗಳು ಚಿಕ್ಕೋಡಿಯಿಂದ ಬಂದಿದ್ದರೆ, ಭಾಷಾ ವಿಷಯಗಳು ಬೆಳಗಾವಿ ಯಿಂದ ಮೌಲ್ಯಮಾಪನಕ್ಕಾಗಿ ಬಂದಿವೆ. ‘ನಮಗೆ ಅಲ್ಲಿನವರ ಮೇಲೆ, ಅಲ್ಲಿನ ಶಿಕ್ಷಣ, ಆಡಳಿತದ ಮೇಲೆ ದೋಷಾರೋಪಣೆ ಮಾಡುವ ಯಾವುದೇ ಇರಾದೆ ಇಲ್ಲ, ಆದರೆ ನಮ್ಮ ಮೌಲ್ಯಮಾಪನ ವೇಳೆ ಕಂಡು ಬಂದಿರುವ ಪ್ರಕಾರ ಕೋರ್ ವಿಷಯಗಳಲ್ಲಿ 80ಕ್ಕೆ 79, 80 ಅಂಕ ಪಡೆದ ಉತ್ತರ ಪತ್ರಿಕೆಗಳ ಸಂಖ್ಯೆ ಅಧಿಕ ಇದೆ. ಸಮಾಜದಲ್ಲಿ 9ನೇ ಪ್ರಶ್ನೆ ಬಹುತೇಕರದ್ದು ತಪ್ಪು ಬಂದಿದೆ. ಇದು ನಮಗೆ ಸಂಶಯ ತಂದಿದೆ’ ಎಂದು ಶಿಕ್ಷಕಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು. ಕಠಿಣ ನಿಯಮಾವಳಿಗಳೊಂದಿಗೆ ಪರೀಕ್ಷೆ ನಡೆಸಲಾಗುತ್ತದೆ. ಆದರೂ ಈ ರೀತಿಯ ಲೋಪಗಳು ನಡೆದಿರುವುದರ ಬಗ್ಗೆ ಇಲಾಖೆಯಿಂದ ವಿಚಾರಣೆ ಆಗಬೇಕು ಎನ್ನುವುದು ಕೆಲವು ಮೌಲ್ಯಮಾಪಕರ ಅಭಿಮತ.

ಕಂಡುಬಂದ ಅಂಶಗಳೇನು?: ಮೌಲ್ಯಮಾಪನ ವೇಳೆ ಮುಖ್ಯವಾಗಿ ಉತ್ತರ ಪತ್ರಿಕೆಗಳಲ್ಲಿ ಎರಡು ರೀತಿಯ ಹಸ್ತಾಕ್ಷರಗಳು ಕಂಡುಬಂದಿವೆ. ಇದರಿಂದ ಕೆಲವು ಉತ್ತರಗಳು ವಿದ್ಯಾರ್ಥಿಗಳದ್ದು ಇದ್ದರೆ, ಉಳಿದದ್ದು ಬೇರೆ ಯಾರೋ ಬರೆದುಕೊಟ್ಟಂತೆ ಕಂಡುಬಂದಿದೆ. ಇನ್ನು ಉತ್ತರಗಳೆಲ್ಲವೂ ಒಂದೇ ರೀತಿ ಇದ್ದರೆ, ತಪ್ಪುಗಳು ಬಹುತೇಕ ಕಟ್ಟುಗಳಲ್ಲಿ ಒಂದೇ ಆಗಿವೆ. ಇದು ಮಾಸ್ ಕಾಪಿಯಿಂಗ್ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.

ದೂರು ನೀಡಲು ಅವಕಾಶ: ಎಲ್ಲ ಮೌಲ್ಯಮಾಪಕರು ಮುಂದೆ ಬಂದರೆ ಪರೀಕ್ಷೆಗಳಲ್ಲಿ ನಕಲು ನಡೆದಿರುವ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲು ಅವಕಾಶ ಇದೆ. ಆದರೆ ಬಹುತೇಕರು ಒಳಗಿಂದಲೇ ಹೇಳಿಕೊಳ್ಳುತ್ತಾರೆಯೇ ಹೊರತು ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಒಂದು ವೇಳೆ ಮುಂದೆ ಬಂದರೆ ಮೌಲ್ಯಮಾಪನದ ಕೊನೆಗೆ ದೂರು ನೀಡಬಹುದು ಎಂದು ಮೌಲ್ಯಮಾಪನ ಮಾಡಿದ ಹಿರಿಯ ಶಿಕ್ಷಕರೊಬ್ಬರು ಹೇಳುತ್ತಾರೆ.

ನನಗೆ ಇದುವರೆಗೆ ಸಾಮೂಹಿಕ ನಕಲು ಬಗ್ಗೆ ದೂರು ಬಂದಿಲ್ಲ. ಯಾರಾದರೂ ದೂರು ನೀಡಿದಲ್ಲಿ ಪ್ರತಿಕ್ರಿಯಿಸಬಹುದಿತ್ತು. ಪರೀಕ್ಷೆಗಳು ಎಲ್ಲ ಕಡೆ ಕಟ್ಟುನಿಟ್ಟಾಗಿ ನಿಗಾವಣೆಯೊಂದಿಗೆ ನಡೆದಿರುತ್ತವೆ. | ಸುಧಾಕರ್ ಡಿಡಿಪಿಐ, ದ.ಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net