

ರಾಯಬಾಗ: ಅಂಚೆ ಇಲಾಖೆ ಜನಸಾಮಾನ್ಯರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಅಂಚೆ ಕಚೇರಿಯಲ್ಲಿ ಚಿಕ್ಕೋಡಿಯ ಅಂಚೆ ಇಲಾಖೆ ವಿಭಾಗ ಹಾಗೂ ರಾಯಬಾಗ ಉಪವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಅಂಚೆ ಜನಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ತಂತ್ರಜ್ಞಾನ ಉನ್ನತೀಕರಿಸಿ ಅಂಚೆ ಇಲಾಖೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಜನರಿಗೆ ಅನೇಕ ಸೇವೆಗಳನ್ನು ನೀಡುತ್ತಿದೆ ಎಂದರು.
ರಾಯಬಾಗ ಅಂಚೆ ಕಚೇರಿಯಲ್ಲಿ ಆಧಾರ್ ಸೇವೆ ಸ್ಥಗಿತಗೊಂಡಿರುವುದಾಗಿ ಅನೇಕ ದೂರುಗಳು ಬರುತ್ತಿದ್ದು, ಇಲಾಖೆಯವರು ಕೂಡಲೇ ಈ ಸೇವೆ ಪ್ರಾರಂಭಿಸಬೇಕು ಎಂದು ಸೂಚಿಸಿದರು.
ಚಿಕ್ಕೋಡಿ ಅಂಚೆ ಅೀಕ್ಷಕ ಆರ್.ವೈ.ಮಧುಸಾಗರ, ರಾಯಬಾಗ ಅಂಚೆ ನಿರೀಕ್ಷಕ ಎಸ್.ಆರ್.ಚವ್ಹಾಣ, ಉಪತಹಸೀಲ್ದಾರ್ ಪರಮಾನಂದ ಮಂಗಸೂಳಿ, ಪಿಎಸ್‌ಐ ಆನಂದ ಬಿ., ಮನೋಜಕುಮಾರ ವಿ., ಆರ್.ಕೆ.ಉಮರಾಣಿ, ಎಸ್.ಎ.ಸಾರಾಪೂರೆ, ಶರಣಬಸಪ್ಪ ಹೂಗಾರ, ಸಂಗಪ್ಪ ಕಾಂಬಳೆ, ಜಿ.ಎಂ.ರಾಯಮಾನೆ, ದರ್ಶನ ಉಪಾಧ್ಯೆ, ದೀಪಕ ಕಾಂಬಳೆ, ಸಾವಿತ್ರಿ ಕಡಿಬಾಗಿಲ ಇತರರಿದ್ದರು.