ಸಾಮೂಹಿಕ ಭಜನಾ ಸ್ಪರ್ಧೆ 12ರಂದು

BHAJANE
Published on

ಶಿರಸಿ: ದಿನನಿತ್ಯದ ಧಾವಂತದಲ್ಲಿ ದೇವರನ್ನು ನೆನೆಯುವ ಭಜನಾ ಕಾರ್ಯಕ್ರಮಗಳಿಂದ ಜನತೆ ವಿಮುಖವಾಗುತ್ತಿದ್ದಾರೆ. ಇದನ್ನು ತಪ್ಪಿಸಿ ಸಾರ್ವಜನಿಕರಲ್ಲಿ ಭಜನೆಯ ಬಗ್ಗೆ ಇನ್ನಷ್ಟು ಪ್ರೇರಣೆ ನೀಡುವ ಉದ್ದೇಶದಿಂದ ಶಿರಸಿ ತಾಲೂಕು ಮಟ್ಟದ ಸಾಮೂಹಿಕ ಭಜನಾ ಸ್ಪರ್ಧೆಯನ್ನು ನಗರದ ನೆಮ್ಮದಿ ರಂಗಧಾಮದಲ್ಲಿ ಅ. 12ರಂದು ಆಯೋಜಿಸಲಾಗಿದೆ ಎಂದು ರಾಜ್ಯ ಜಾನಪದ ಪರಿಷತ್ ತಾಲೂಕು ಖಜಾಂಚಿ ರಾಜು ಉಗ್ರಾಣಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಜನೆ ಮಾಡುವುದರಿಂದ ಮನಸಿನ ನಕಾರಾತ್ಮಕತೆ ದೂರವಾಗಿ ಶಾಂತಿ, ಸಂತೋಷ ಹಾಗೂ ಆಂತರಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಜನಾ ಕಾರ್ಯಕ್ರಮವನ್ನು ಸ್ಪರ್ಧಾ ರೂಪದಲ್ಲಿ ಆಯೋಜಿಸುತ್ತಿದ್ದೇವೆ. ಭಜನಾ ಮೇಳದಲ್ಲಿ ಕನಿಷ್ಠ 5ರಿಂದ 10 ಜನ ಇರಬೇಕಾಗುತ್ತದೆ. ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುತ್ತಿದೆ. ಆಸಕ್ತ ತಂಡಗಳು ಪರಿಷತ್​ನ ತಾಲೂಕು ಘಟಕದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.

ಅಧ್ಯಕ್ಷ ಕೃಷ್ಣ ಪದಕಿ ಮಾಹಿತಿ ನೀಡಿ, ಅಂದು ಬೆಳಗ್ಗೆ 10 ಗಂಟೆಗೆ ಮಾರಿಕಾಂಬಾ ದೇವಾಲಯದ ಉಪಾಧ್ಯಕ್ಷ ಸುದೇಶ ಜೋಗಳೇಕರ್ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ಸ್ಕೊಡ್ವೆಸ್ ಸಂಸ್ಥೆ ಡಾ. ವೆಂಕಟೇಶ ನಾಯ್ಕ, ಸರಸ್ವತಿ ಎನ್. ರವಿ., ಪ್ರಮುಖರಾದ ವಿ.ಪಿ. ಹೆಗಡೆ ವೈಶಾಲಿ, ರಾಮು ಕಿಣಿ ಇತರರು ಪಾಲ್ಗೊಳ್ಳಲಿದ್ದಾರೆ. ಸಂಜೆ 4.30ಕ್ಕೆ ಬಹುಮಾನ ವಿತರಣೆ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ ಎಂದರು. ಗಣಪತಿ ಹೆಗಡೆ ವರ್ಗಾಸರ, ರಾಮಚಂದ್ರ ಹೆಗಡೆ ಬಂಡೀಮನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net