

ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನ ಮಂAಗಳವಾರ ಶ್ರೀಮಠದ ಪೀಠಾಽಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ದೇಶಾದ್ಯಂತದ ಎರಡು ಸಾವಿರ ಭಜನಾ ಮಂಡಲಿಗಳಿAದ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಯೋಜನೆಯ ಆಶ್ರಯದಲ್ಲಿ ಸಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.
ನಂತರ ಶ್ರೀಗಳು ಶ್ರೀ ನ್ಯಾಯಸುಧಾ ಪರೀಕ್ಷೆಯನ್ನು ನಡೆಸಿಕೊಟ್ಟರು. ಬಳ್ಳಾರಿಯ ಸಂಸದರಾದ ಇ.ತುಕಾರಾಂ ಮತ್ತು ಬೆಂಗಳೂರಿನ ಪೂರ್ಣಪ್ರe್ಞÁ ವಿದ್ಯಾಪೀಠದ ಯು.ಕೇಶವಾಚಾರ್ಯರ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ವ್ಯಾಸರಾಜ ಮಠದ ಶ್ರೀವಿದ್ಯಾ ವಿಜಯ ತೀರ್ಥರು ಸೇರಿದಂತೆ ಅನೇಕರು ಇದ್ದರು.