ಮಸ್ಕಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಇಂದು

03112020 Maski Purasabhe
Published on

ಮಸ್ಕಿ: ಪಟ್ಟಣದ ಪುರಸಭೆಗೆ ಬುಧವಾರ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಮೀಸಲು ನಿಗದಿಯಾಗಿ ಆದಾಗಿನಿಂದ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ. ಅಧ್ಯಕ್ಷ ಸ್ಥಾನ ಪಪಂ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಬಲರಾಮ ಕಟ್ಟಿಮನಿ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯನಗೌಡ ತಿಳಿಸಿದ್ದಾರೆ.

ಪುರಸಭೆಯಲ್ಲಿ 23 ಸದಸ್ಯ ಬಲವಿದ್ದು, ಇದರಲ್ಲಿ ಮೂರನೇ ವಾರ್ಡ್ ಸದಸ್ಯ ಅಮರೇಶ ನಂದ್ಯಾಳ ನಿಧನರಾಗಿದ್ಧಾರೆ. ಈ ಸ್ಥಾನಕ್ಕೆ ಇನ್ನು ಉಪಚುನಾವಣೆ ನಡೆಯದ ಕಾರಣ ಸದ್ಯ ಒಟ್ಟು 22 ಸದಸ್ಯರಿದ್ದಾರೆ. ಈಗಾಗಲೇ ಬಹುತೇಕ ಸದಸ್ಯರು ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಇದೆ. ಈಗಾಗಲೇ ಸದಸ್ಯರು ತಮ್ಮ ತಮ್ಮ ರಾಜಕೀಯ ನಾಯಕರ ಮುಖಾಂತರ ಸ್ಥಳೀಯ ಬಿಜೆಪಿ ಮುಖಂಡರಿಗೆ ಒತ್ತಡಗಳು ಹೇರಿದ್ದಾರೆ. ಮುಖಂಡರು ಸಹ ಅಕಾಂಕ್ಷಿಗಳ ಜತೆಯಲ್ಲಿ ಸಭೆ ನಡೆಸಿ, ಯಾರನ್ನು ಆಯ್ಕೆ ಮಾಡಬೇಕೆಂಬ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಅದೃಷ್ಟ ಲಕ್ಷ್ಮಿ ಯಾರ ಕೊರಳಿಗೆ ಎನ್ನುವದನ್ನು ಕಾದು ನೋಡಬೇಕಷ್ಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net