ಮಸ್ಕಿಯನ್ನು ಅಲಂಕಾರ ಮಾಡಿದ ಕಾರ್ಯಕರ್ತರು, ಸಿಎಂ ಬಿ.ಎಸ್.ಯಡಿಯೂರಪ್ಪ ಆಗಮನ ಹಿನ್ನೆಲೆ

19032021 Maski by-election-BJP balloon flight
Published on

ಬಲೂನ್ ಹಾರಾಟಕ್ಕೆ ಪ್ರತಾಪಗೌಡ ಪಾಟೀಲ್ ಚಾಲನೆ


ಮಸ್ಕಿ: ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಆಗಮಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಪಟ್ಟಣವನ್ನು ಅಲಂಕಾರ ಮಾಡಿದ್ದಾರೆ. ಅದರ ಭಾಗವಾಗಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರು ಶುಕ್ರವಾರ ಪ್ರಚಾರಾರ್ಥವಾಗಿ ಬಲೂನ್ ಹಾರಾಟಕ್ಕೆ ಚಾಲನೆ ನೀಡಿದರು.

ಪಟ್ಟಣದ ಪೊಲೀಸ್ ಠಾಣೆ ಹತ್ತಿರದ ಬಯಲು ಜಾಗದಲ್ಲಿ ನಡೆಯಲಿರುವ ಬಹಿರಂಗ ಸಭೆ ನಡೆಯುವ ಸ್ಥಳದ ಹತ್ತಿರ ಆಕರ್ಷವಾದ ಬಲೂನ್‌ನಲ್ಲಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟಿಲ್, ಉಪಾಧ್ಯಕ್ಷ ವಿಜಯೇಂದ್ರ ಹಾಗೂ ಪ್ರತಾಪಗೌಡ ಪಾಟೀಲರ ಭಾವಚಿತ್ರಗಳಿವೆ.

ಬಹಿರಂಗ ಸಭೆ ನಡೆವ ಸ್ಥಳದಲ್ಲಿ ತಾತ್ಕಾಲಿಕ ಬಯಲು ರಂಗ ಮಂಟಪ, 10 ಸಾವಿರಕ್ಕೂ ಹೆಚ್ಚು ಜನ ಕೂತು ಕಾರ್ಯಕ್ರಮ ನೋಡಲು ಆಸನದ ವ್ಯವಸ್ಥೆ, ಲಿಂಗಸುಗೂರು, ಸಿಂಧನೂರು ಭಾಗದ ಕಡೆ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಅಲಂಕಾರಿಕ ಕಮಾನುಗಳನ್ನು ಅಳವಡಿಸಲಾಗಿದೆ.

ಕುರಿ-ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ತಾಪಂ ಸದಸ್ಯ ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ವಿಶ್ವನಾಥ ಪಾಟೀಲ, ಉಮಾಕಾಂತಪ್ಪ ಸಂಗನಾಳ, ಬಸಪ್ಪ ಬ್ಯಾಳಿ, ಸೀನಯ್ಯ ಇಲ್ಲೂರು, ದೊಡ್ಡಪ್ಪ ಕಡಬೂರು, ಚಂದ್ರಕಾಂತ ಗೂಗೆಬಾಳ, ಯಲ್ಲೋಜಪ್ಪ ಕೊರೆಕರ್, ವೀರೇಶ ಕಮತರ್, ಶ್ರೀಧರ ಕಡಬೂರು, ಅಮರೇಶ ಪಾಟೀಲ, ಬಾಲಾಜಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net