ಯಮನೂರಪ್ಪ ಗಂಧದ ಮೆರವಣಿಗೆ ಅದ್ದೂರಿ

18-msk-1
Published on

ಮಸ್ಕಿ: ಪಟ್ಟಣದ ವಾಲ್ಮೀಕಿ ನಗರದಲ್ಲಿ ರಾಜಾ ಬಾಗಸವಾರ್ (ಯಮನೂರಪ್ಪ) ದರ್ಗಾದ ಉರುಸ್ ವಿಜೃಂಭಣೆಯಿಂದ ಗುರುವಾರ ಜರುಗಿತು. ಕಿಲ್ಲಾದಲ್ಲಿರುವ ಹಜರ್ ಮೌಲಾಲಿ ದರ್ಗಾದಿಂದ ಪಟ್ಟಣದ ಮುಖ್ಯ ಬೀದಿವರೆಗೆ ಗಂಧದ ಮೆರವಣಿಗೆ ನಡೆಸಲಾಯಿತು. ದರ್ಗಾದಲ್ಲಿ ಜಾವೇದ್ ಖಾಜಿ ಕುರಾನ್ ಪಠಣ ಮಾಡುವ ಮೂಲಕ ದರ್ಗಾಕ್ಕೆ ಗಂಧವನ್ನು ಲೇಪನ ಮಾಡಿದರು. ಬಳಿಕ ಭಕ್ತರು ದರ್ಗಾಕ್ಕೆ ಭೇಟಿ ನೀಡಿ ಯಮನೂರಪ್ಪ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net