

ಮಸ್ಕಿ: ವೀರಶೈವ ಲಿಂಗಾಯತ ಸಮುದಾಯ ಸಮಾನತೆ ಸಾರಿದ ಸಮಾಜವಾಗಿದೆ. ಆದರೆ ಒಳ ಪಂಗಡಗಳ ಹೆಸರಿನಲ್ಲಿ ಚಿದ್ರವಾಗಿದೆ. ಎಲ್ಲ ಒಳ ಪಂಗಡಗಳು ಒಟ್ಟುಗೂಡಿಸಿ ವೀರಶೈವ ಲಿಂಗಾಯತ ಸಮಾಜವನ್ನು ಗಟ್ಟಿಗೊಳಿಸುವುಕ್ಕೆ ಸಂಘಟನೆ ಮಾಡಲಾಗುತ್ತಿದೆ ಎಂದು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಬಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸೆ.10 ರಂದು ಮಸ್ಕಿ ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತರ ಒಗ್ಗೂಡುವಿಕೆಗಾಗಿ ಸಮಾವೇಶ ನಡೆಯಲಿದೆ ಎಂದರು.
ಇದನ್ನೂ ಓದಿ : ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅನನ್ಯ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಪುರ, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಆನ್ವರಿ, ಶಾಸಕರಾದ ಹಂಪನಗೌಡ ಬಾದರ್ಲಿ, ಶಿವರಾಜ ಪಾಟೀಲ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಎಂಎಲ್ಸಿ ಮನೋಹರ ಮಸ್ಕಿ ಸೇರಿದಂತೆ ಅನೇಕ ಸ್ವಾಮೀಜಿಗಳು ಭಾಗವಹಿಸುವರು ಎಂದರು.
ಪ್ರಮುಖರಾದ ಅಪ್ಪಾಜಿಗೌಡ ಪಾಟೀಲ, ಅಂದಾನಪ್ಪ ಗುಂಡಳ್ಳಿ, ವೀರೇಶ ಪಾಟೀಲ, ಪುರಸಭೆ ಸದಸ್ಯ ಸುರೇಶ ಹರಸುರು, ಘನಮಠದಯ್ಯ ಸಾಲಿಮಠ, ನಾಗರಾಜ ಸಜ್ಜನ, ಸುಗಣ್ಣ ಬಾಳೆಕಾಯಿ, ಶಿವಕುಮಾರ ವಟಗಲ್, ಅಜಯ ನಾಡಗೌಡ, ಮಹಾಂತೇಶ ಶಿಕ್ಷಕರು, ತಿರುಪತಿ ಮಡಿವಾಳ ಮಾತನಾಡಿದರು.