ವೀರಭದ್ರಸ್ವಾಮಿ ಜಯಂತಿ ಅದ್ದೂರಿ

30082022 msk veerbhadra
Published on

ಮಸ್ಕಿ: ವೀರಭದ್ರಸ್ವಾಮಿಯ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣದಲ್ಲಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಲ್ಕು ವರ್ಷಗಳಿಂದ ಭಾದ್ರಪದ ಮಾಸದ ಮೊದಲ ಮಂಗಳವಾರ ವೀರಭದ್ರಸ್ವಾಮಿಯ ಜಯಂತಿ ಆಚರಿಸಲಾಗುತ್ತಿದೆ. ದೇವಸ್ಥಾನದಲ್ಲಿ ಬೆಳಗಿನ ಜಾವ ರುದ್ರಾಭೀಷೇಕ, ಸಹಸ್ರ ಬಿಲ್ವಾರ್ಚನೆ ನಡೆಯಿತು. ಎಲೆ ಚಟ್ಟುಗಳಿಂದ ವೀರಭದ್ರಸ್ವಾಮಿಯನ್ನು ಅಲಂಕರಿಸಲಾಗಿತ್ತು. ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಎಡೆ ಸಮರ್ಪಿಸಿದರು. ದೇವಸ್ಥಾನ ಸಮಿತಿಯ ಅಧ್ಯಕ್ಷ ಮಹೇಶ ಕೊಡಿಹಾಳ ಹಾಗೂ ಸಮಿತಿಯ ಸದಸ್ಯರು ಭಕ್ತರಿಗೆ ಪ್ರಸಾದದ ವ್ಯಸ್ಥೆ ಮಾಡಿಸಿದ್ದರು. ಚನ್ನಪ್ಪ ಯಂಬಲದ, ಚನ್ನಪ್ಪ ಕೊಡಿಹಾಳ, ಬಸವರಾಜ ಕಾರ‌್ಲಕುಂಟಿ, ನಾಗರಾಜ ಯಂಬಲದ, ಅಮರೇಶ ಬ್ಯಾಳಿ ಇತರರು ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net