

ಮಸ್ಕಿ: ವಿಶ್ವಾವಸು ಸಂವತ್ಸರದಲ್ಲಿ ಫಸಲು ಹೆಚ್ಚಳ, ಹೈನುಗಾರಿಕೆ ಅಭಿವೃದ್ಧಿ ಹಾಗೂ ಧಾರ್ಮಿಕ ಕಾರ್ಯಗಳು ಅಧಿಕವಾಗಿ ಜರುಗುತ್ತವೆ ಎಂದು ಉದ್ಬಾಳ ಹಿರೇಮಠದ ಶಶಿಧರ ಶಾಸ್ತ್ರೀ ಹೇಳಿದರು.
ಪಟ್ಟಣದ ದೈವದಕಟ್ಟೆ ಮೇಲೆ ಯುಗಾದಿ ಹಬ್ಬದ ನಿಮಿತ್ತ ಹೊಸ ಪಂಚಾಂಗವನ್ನು ಪಠಿಸಿ, ಈ ವರ್ಷದ ಭವಿಷ್ಯ ನುಡಿದರು. ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಯಿದ್ದು, ಅದು ಮುಂದುವರಿಯಲಿದೆ. ದೇಶಕ್ಕೆ ಸೇನೆ ಪ್ರಮುಖವಾಗಿದ್ದು, ಬಲಿಷ್ಠವಾಗಿದೆ. ಉತ್ತಮ ಮಳೆಯಿಂದ ಈ ಬಾರಿ ಎಲ್ಲ ಬೆಳೆಗಳು ಸಮೃದ್ಧವಾಗಲಿವೆ ಎಂದರು.
ಮಹೇಶ ಹಿರೇಮಠ ಪಂಚಾಂಗ ಪೂಜೆ ನೆರವೇರಿಸಿದರು. ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಘನಮಠದಯ್ಯ ಸಾಲಿಮಠ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ತೋಟಯ್ಯಸ್ವಾಮಿ ಕಡಬೂರು, ಪಂಪಯ್ಯಸ್ವಾಮಿ ಸುಂಕನೂರು, ಬಸನಗೌಡ, ಮಲ್ಲಪ್ಪ ಕುಡತನಿ ಇನ್ನಿತರರಿದ್ದರು.