ಕರ್ತವ್ಯ ಪಾಲಿಸಲು ಮತದಾನ ಮಾಡಿ

Untitled design (31)
ಮಸ್ಕಿಯಲ್ಲಿ ಭ್ರಮರಾಂಬ ದೇವಸ್ಥಾನದಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮಕ್ಕೆ ಸಹಾಯಕ ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ಚಾಲನೆ ನೀಡಿದರು. ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು, ಟ್ರಸ್ಟ್ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ, ಪಂಪಣ್ಣ ಗುಂಡಳ್ಳಿ, ತಹಸೀಲ್ದಾರ ಅರಮನೆ ಸುಧಾ, ಗ್ರೇಡ್ 2 ತಹಸೀಲ್ದಾರ ರಾಘವೇಂದ್ರ ಕೆ., ಜಾನಪದ ಹಾಡುಗಾರ ಕಡಬಗೆರೆ ಮುನಿರಾಜು, ಕೆ.ಮಲ್ಲಯ್ಯ ಇದ್ದರು.
Published on

ಮಸ್ಕಿ: ಭಾರತೀಯರಿಗೆ ಯುಗಾದಿ ಹೊಸವರ್ಷವಾಗಿದ್ದು, ಸಡಗರ ಸಂಭ್ರಮದಿಂದ ಆಚರಿಸಬೇಕು ಎಂದು ಮಸ್ಕಿ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಭ್ರಮರಾಂಬ ಚಾರಿಟಬಲ್ ಟ್ರಸ್ಟ್ ಮಂಗಳವಾರ ಹಮ್ಮಿಕೊಂಡಿದ್ದ ಯುಗಾದಿ ಸಂಭ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ವರ್ಷ ಯುಗಾದಿ ಹಬ್ಬದ ಜತೆಗೆ ಚುನಾವಣೆಯ ಹಬ್ಬ ಕೂಡ ಬಂದಿದೆ. ಪ್ರತಿಯೊಬ್ಬ ಕಡ್ಡಾಯವಾಗಿ ಮತದಾನ ಮಾಡಿ ಕರ್ತವ್ಯ ಪಾಲಿಸಬೇಕು. ಯಾವುದೆ ಆಮಿಷಗಳಿಗೆ ಬಲಿಯಾಗದೆ ವಿವೇಚನೆಯಿಂದ ಮತದಾನ ಮಾಡಬೇಕು ಎಂದರು.

ಸಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಮತ್ತು ಟ್ರಸ್ಟ್ ಅಧ್ಯಕ್ಷ ಡಾ.ಶಿವಶರಣಪ್ಪ ಇತ್ಲಿ ಮಾತನಾಡಿದರು. ಟ್ರಸ್ಟ್ ಉಪಾಧ್ಯಕ್ಷ ಪಂಪಣ್ಣ ಗುಂಡಳ್ಳಿ, ತಹಸೀಲ್ದಾರ ಅರಮನೆ ಸುಧಾ, ಗ್ರೇಡ್ 2 ತಹಸೀಲ್ದಾರ ರಾಘವೇಂದ್ರ ಕೆ. ಸೆಕ್ಟರ್ ಅಧಿಕಾರಿ ಕೆ.ಮಲ್ಲಯ್ಯ, ಸಿಇಒ ವೀರೇಶ ಹಿರೇಮಠ ಇದ್ದರು.
ಚಂದನವಾಹಿನಿಯ ಗಾನ ಗಾರುಡಿಗ ಕಾರ್ಯಕ್ರಮದ ಕಡಬಗೆರೆ ಮುನಿರಾಜು ಮತ್ತು ಅವರ ತಂಡದ ಸದಸ್ಯರು ಜಾನಪದ ಹಾಡುಗಳು, ಭಾವ ಗೀತೆ ಹಾಗೂ ಸಿನಿಮಾ ಹಾಡುಗಳ ರಸದೌತಣ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net