ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಆದ್ಯತೆ; ಮಸ್ಕಿ ತಾಪಂ ಸಹಾಯಕ ನಿರ್ದೇಶಕ ಶಿವಾನಂದ ರಡ್ಡಿ ಹೇಳಿಕೆ

15102022 maski narega scheme
Published on

ಮಸ್ಕಿ: ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯಲ್ಲಿ ಜಿಯೋ ಸ್ಪೆಷಲ್ ತಂತ್ರಜ್‌ನ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಸ್ಕಿ ತಾಪಂ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಶಿವಾನಂದ ರಡ್ಡಿ ಹೇಳಿದರು.

ತಾಲೂಕಿನ ಅಡವಿಭಾವಿ ಗ್ರಾಪಂ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ, ಜಿಯೋ ಸ್ಪೆಷಲ್ ತಂತ್ರಜ್ಞಾನದಡಿ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ಕಾಮಗಾರಿ ಅನುಷ್ಠಾನ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಭವಿಷ್ಯದ ದೃಷ್ಟಿಯಿಂದ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ಅಗತ್ಯ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಲ ಸಂಪನ್ಮೂಲಗಳ ರಕ್ಷಣೆಗೆ ನರೇಗಾದಡಿ ಆದತ್ಯೆ ನೀಡುತ್ತಿದೆ. ಜಿಯೋ ಸ್ಪೆಷಲ್ ತಂತ್ರಾಂಶದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಜಾಗ, ಜಲ ಮೂಲಗಳನ್ನು ದಾಖಲಿಸಬೇಕು. ತದನಂತರ ಗ್ರಾಪಂ ಅಭಿವೃದ್ಧಿ ಯೋಜನೆ ರೂಪಿಸುವಾಗ ಈ ಅಂಶಗಳನ್ನು ಪರಿಗಣಿಸಬೇಕೆಂದರು.

ಎಫ್‌ಇಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಖಾದರ್ ಪಾಷಾ ಮಾತನಾಡಿ, ಮೊದಲು ಗ್ರಾಮದ ನಕಾಶೆ ರಚಿಸಿಕೊಂಡು ಎಲ್ಲ ಸಮುದಾಯದವರನ್ನೊಳಗೊಂಡ ಗ್ರಾಮ ಸಮಿತಿ ರಚಿಸಬೇಕು. ವೇಳಾಪಟ್ಟಿ ಅನುಸಾರ ಸಭೆ ನಡೆಸಿ ಕಾಮಗಾರಿ ಅಂದಾಜು ಪಟ್ಟಿ ತಯಾರಿಸಿ ಮುಂದುವರಿಯಬೇಕು. ಇನ್ಮುಂದೆ ನರೇಗಾದಡಿ ಕೈಗೊಳ್ಳುವ ಕಾಮಗಾರಿಗಳು ಈ ತಂತ್ರಾಂಶಕ್ಕೆ ಜೋಡಣೆಯಾಗಲಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net