ಮಸ್ಕಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

maski dam
ಮಸ್ಕಿ ಜಲಾಯ ಭರ್ತಿಯಾಗಿದ್ದರಿಂದ ಗುರುವಾರ ನೀರು ಬಿಡಲಾಯಿತು.
Published on

ಮಸ್ಕಿ: ತಾಲೂಕಿನ ಮಾರಲದಿನ್ನಿ ಬಳಿ ನಿರ್ಮಿಸಿರುವ ಮಸ್ಕಿ ನಾಲಾ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದರಿಂದ ಹೆಚ್ಚುವರಿ ನೀರು ಹಳ್ಳಕ್ಕೆ ಬಿಡಲಾಗುತ್ತಿದೆ.

ಜಲಾಶಯ ಗರಿಷ್ಠ 472.12 ಮೀಟರ್ ನೀರು ಸಂಗ್ರಹ ಸಾಮಾರ್ಥ್ಯ ಹೊಂದಿದೆ. ಸದ್ಯ ಜಲಾಶಯ ಭರ್ತಿಯಾಗಿದ್ದರಿಂದ 150 ಕ್ಯೂಸೆಕ್ ನೀರನ್ನು ಗುರುವಾರ ಹಳ್ಳಕ್ಕೆ ಬಿಡಲಾಗಿದೆ. ಒಳಹರಿವು ಹೆಚ್ಚಿದರೆ ಹಳ್ಳಕ್ಕೆ ಮತ್ತಷ್ಟು ನೀರು ಹರಿಸಬೇಕಾಗಲಿದ್ದು, ಜನರು ಎಚ್ಚರಿಕೆಯಿಂದ ಇರಬೇಕು.

ಜಾನುವಾರುಗಳನ್ನು ಹಳ್ಳಕ್ಕೆ ಬಿಡಬಾರದು ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ತಿಳಿಸಿದ್ದಾರೆ. ಮಸ್ಕಿ ಪುರಸಭೆ, ಬಳಗಾನೂರು ಪಟ್ಟಣ ಪಂಚಾಯಿತಿ ಹಾಗೂ ಹಳ್ಳದ ತೀರದಲ್ಲಿ ಗ್ರಾಪಂ ಸಿಬ್ಬಂದಿ ಡಂಗುರ ಸಾರಿ ಜಾಗೃತಿ ಮೂಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net