ಶಿವಣ್ಣ ನಾಯಕ ಮಸ್ಕಿ ತಾಪಂ ಅಧ್ಯಕ್ಷ

06072020 Maski TP
Published on

ರೇಣುಕಾ ಪಂಪನಗೌಡ ಉಪಾಧ್ಯಕ್ಷೆ | ಇಬ್ಬರದೂ ಅವಿರೋಧ ಆಯ್ಕೆ

ಮಸ್ಕಿ: ತಾಪಂ ಅಧ್ಯಕ್ಷರಾಗಿ ಶಿವಣ್ಣ ನಾಯಕ ಹಾಗೂ ಉಪಾಧ್ಯಕ್ಷರಾಗಿ ರೇಣುಕಾ ಪಂಪನಗೌಡ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದು, ಇವರ ಆಯ್ಕೆಯನ್ನು ಚುನಾವಣಾಧಿಕಾರಿಯಾದ ಎಸಿ ರಾಜಶೇಖರ ಡಂಬಳ ಘೋಷಣೆ ಮಾಡಿದರು.

ಎಸ್‌ಟಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಶಿವಣ್ಣ ನಾಯಕ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ರೇಣುಕಾ ಪಂಪನಗೌಡ ಬಿಜೆಪಿ ಬೆಂಬಲದೊಂದಿಗೆ ನಾಮಪತರ ಸಲ್ಲಿಸಿದ್ದರೆ, ಬೆಜೆಪಿಯ ಮತ್ತೊಬ್ಬ ಸದಸ್ಯೆ ವಿಜಯಲಕ್ಷ್ಮೀ ಸಿದ್ದನಗೌಡ ಕೂಡ ನಾಮಪತ್ರ ಸಲ್ಲಿಸಿದ್ದರು. ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಸಂಧಾನ ನಡೆಸಲು ಯತ್ನಿಸಿದರೂ ಯಶಸ್ವಿಯಾಗಲಿಲ್ಲ. ನಂತರ ಲಾಟರಿ ಎತ್ತಲಾಯಿತು. ಅದರಲ್ಲಿ ರೇಣುಕಾ ಪಂಪನಗೌಡರಿಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದರಿಂದ ಅವರ ನಾಮಪತ್ರ ಸಲ್ಲಿಸಲಾಯಿತು.

ಒಟ್ಟು 15 ಸದಸ್ಯ ಬಲವಿದ್ದ ಇಲ್ಲಿ, ಬಿಜೆಪಿಯ 6, ಕಾಂಗ್ರೆಸ್‌ನ 5 ಸದಸ್ಯರು ಪಾಲ್ಗೊಂಡಿದ್ದರೆ, ಕಾಂಗ್ರೆಸ್‌ನ 4 ಸದಸ್ಯರು ಗೈರಾಗಿದ್ದರು.
ಎಸಿ ರಾಜಶೇಖರ ಡಂಬಳ, ತಹಸೀಲ್ದಾರ್ ಬಲರಾು ಕಟ್ಟಿಮನಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ ಚುನಾವಣೆ ನಡೆಸಿದರು. ಸಿಪಿಐ ದೀಪಕ್ ಬೂಸರಡ್ಡಿ, ಪಿಎಸ್‌ಐ ಸಣ್ಣ ವೀರೇಶ ತಾ.ಪಂ. ಕಚೇರಿ ವಾಲ್ಮೀಕಿ ಭವನದ ಹತ್ತಿರ ಬಿಗಿ ಬಂದೋಬಸ್ತ್ ಚುನಾವಣೆ ಮುಗಿಯುತ್ತದ್ದಂತೆ ಅಭಿಮಾನಿಗಳು ಕನಕವೃತ್ತದ ಹತ್ತಿರ ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.

ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ, ಬಿಜೆಪಿ ಮುಖಂಡ ಮಹಾದೇವಗೌಡ ಪಾಟೀಲ, ಬಸವಂತರಾಯ ಕುರಿ, ಅಂದಾನಪ್ಪ ಗುಂಡಳ್ಳಿ, ಅಪ್ಪಾಜಿಗೌಡ ಪಾಟೀಲ, ಬಸನಗೌಡ ಪಾಟೀಲ ಇದ್ದರು. ಕಾಂಗ್ರೆಸ್ ಮುಖಂಡರು ಮತ್ತು ತಾಪಂ ಸದಸ್ಯರು ಇತ್ತ ಸುಳಿಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net