ವಿದ್ಯಾರ್ಥಿನಿ ಹತ್ಯೆಗೈದಿದ್ದ ಯುವಕ ಮೃತ

290322 Murder Person Dead
ಮೃತ ರಮೇಶ
Published on

ಮಸ್ಕಿ: ಪಟ್ಟಣದ ವಿದ್ಯಾರ್ಥಿನಿ ಭೂಮಿಕಾಳನ್ನು (19) ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ರಮೇಶ (32) ಸೋಮವಾರ ಶವವಾಗಿ ಪತ್ತೆಯಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಪಟ್ಟಣದ ಸಾನಬಾಳ ರಸ್ತೆಯಲ್ಲಿ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ್ದ ಸ್ವಲ್ಪ ದೂರದಲ್ಲೇ ಜಾಲಿಗಿಡಗಳ ಪೊದೆಯಲ್ಲಿ ರಮೇಶನ ಶವ ಪತ್ತೆಯಾಗಿದೆ. ವಾಸನೆ ಬರುತ್ತಿದ್ದ ಹಿನ್ನಲೆಯಲ್ಲಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದವರು ಪೊಲೀಸ್ ಠಾಣೆಗೆ ಮಾಹಿತಿ ಮಾಡಿದ್ದಾರೆ. ಸ್ಥಳಕ್ಕೆ ಸಿಪಿಐ ಸಂಜೀವಕುಮಾರ ಬಳಿಗಾರ ಹಾಗೂ ಪಿಎಸ್‌ಐ ಸಿದ್ದರಾಮ ಬಿದರಾಣಿ ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ.

ಪಟ್ಟಣದ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಭೂಮಿಕಾ ಫೆ.25 ರಂದು ಕೊಲೆಯಾಗಿದ್ದಳು. ಶಾಲೆಯಿಂದ ಮನೆಗೆ ತೆರಳುವಾಗ ರಮೇಶ ಈ ಕೊಲೆ ಮಾಡಿದ್ದ ಬಗ್ಗೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net