

ಮಸ್ಕಿ: ಗಚ್ಚಿನ ಹಿರೇಮಠದಲ್ಲಿ ಆ.17ರ ಬೆಳಗ್ಗೆ 9ಕ್ಕೆ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಸ್ಥಾನದಿಂದ ಪೂರ್ಣಕುಂಭ, ಕಳಸ, ವಾದ್ಯಮೇಳಗಳೊಂದಿಗೆ ನೂತನ ಮಹಾಗೌರಿ ಮೂರ್ತಿಯ ಮೆರವಣಿಗೆ, ಆ.22 ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಗಚ್ಚಿನ ಹಿರೇಮಠದ ಪೀಠಾಧಿಪತಿ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಮಂಗಳವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಆರು ದಿನಗಳವರೆಗೆ ನೂತನ ಮೂರ್ತಿಯನ್ನು ವಿವಿಧ ರೀತಿಯ ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಾಧಿವಾಸ, ಪತ್ರಿ ಪುಷ್ಪಾಧಿವಾಸ, ತೈಲಾಧಿವಾಸ ಹಾಗೂ ವಸ್ತ್ರಾಧಿವಾಸದಲ್ಲಿ ನೆನೆ ಇಟ್ಟು ನಂತರ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನೆರವೇರಲಿದೆ. ಧಾರ್ಮಿಕ ಬಹಿರಂಗ ಸಭೆಯಲ್ಲಿ ಧಾರ್ಮಿಕ ಗುರುಗಳು ಮತ್ತು ರಾಜಕೀಯ ಧುರಿಣರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.