ಸಂಸ್ಕಾರ ಮರೆಯುತ್ತಿರುವ ಯುವಜನತೆ

msk-1
ಮಸ್ಕಿಯಲ್ಲಿ ಪಂಪಯ್ಯಸ್ವಾಮಿ ಸಾಲಿಮಠ ರಚಿತ ಶ್ರೀ ಭ್ರಮರಾಂಬೆ ಕರುಣೆ ಸುಪ್ರಭಾತ ಮತ್ತು ಭಕ್ತಿಗೀತೆಗಳ ಕೃತಿಯನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬಿಡುಗಡೆ ಮಾಡಿದರು. ಸದಾಶಿವಾನಂದ ಸ್ವಾಮೀಜಿ, ವರರುದ್ರಮುನಿ ಶಿವಾಚಾರ್ಯರು ಇತರರಿದ್ದರು.
Published on

ಮಸ್ಕಿ: ಆಧುನಿಕ ಶಿಕ್ಷಣದ ವ್ಯಾಮೋಹದಿಂದ ಹೆಣ್ಣುಮಕ್ಕಳಲ್ಲಿ ಸಂಸ್ಕೃತಿ ಹಾಳಾಗುತ್ತಿದೆ. ಹೆತ್ತವರು ಮಕ್ಕಳ ಕಲಿಕೆ ಮತ್ತು ನಡವಳಿಕೆಯ ಮೇಲೆ ನಿಗಾವಹಿಸಬೇಕು ಎಂದು ಗದಗಿನ ಶಿವಾನಂದ ಬೃಹನ್ಮಠದ ಜಗದ್ಗುರು ಸದಾಶಿವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶನಿವಾರ ಆಯೋಜಿಸಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದು, ಪುರಾಣ-ಪುಣ್ಯಕತೆ, ಮಹಾಭಾರತ ರಾಮಾಯಣ ಕಾಲದಿಂದಲೂ ಮಹಿಳೆಯರನ್ನು ಗೌರವಿಸುತ್ತ ಬರಲಾಗಿದೆ.

ಆದರೆ, ಇತ್ತೀಚೆಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಯುವಜನತೆ ಸಂಸ್ಕಾರರಹಿತರಾಗಿರುವುದು ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಅಂತರಗಂಗೆಯ ಪಂಪಯ್ಯಸ್ವಾಮಿ ಸಾಲಿಮಠ ರಚಿಸಿದ ಶ್ರೀ ಭ್ರಮರಾಂಬೆ ಕರುಣೆ ಸುಪ್ರಭಾತ ಮತ್ತು ಭಕ್ತಿಗೀತೆಗಳ ಕೃತಿಯನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಬಿಡುಗಡೆ ಮಾಡಿದರು. ಕೃತಿಕಾರ ಪಂಪಯ್ಯ ಸಾಲಿಮಠ, ಉಪನ್ಯಾಸಕ ಮಹಾಂತೇಶ ಮಸ್ಕಿ ಮಾತನಾಡಿದರು. ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ರಾಜೇಶ್ವರಿ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net