ಮಲ್ಲಿಕಾರ್ಜುನ ಪಲ್ಲಕ್ಕಿ ಮೆರವಣಿಗೆ ಅದ್ದೂರಿ

Untitled design(23)
ಮಸ್ಕಿ ಸಮೀಪದ ತೀರ್ಥಭಾವಿ ಅಮರೇಶ್ವರ ಹೊಂಡದಲ್ಲಿ ಮಲ್ಲಯ್ಯನ ಪೂಜೆ ನೆರವೇರಿಸಲಾಯಿತು.
Published on

ಮಸ್ಕಿ: ಶ್ರಾವಣ ಮಾಸದ ಮೂರನೇ ಸೋಮವಾರ ಪಟ್ಟಣದ ಆರಾಧ್ಯ ದೈವ ಬೆಟ್ಟದ ಶ್ರೀಮಲ್ಲಿಕಾರ್ಜುನ ದೇವರ ವಿಶೇಷ ಪೂಜಾ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ ಹಾಗೂ ಭಕ್ತರ ಪಾದಯಾತ್ರೆ ಶ್ರದ್ಧಾಭಕ್ತಿಯಿಂದ ಜರುಗಿದವು.

ಬೆಳಗ್ಗೆ ಬೆಟ್ಟದಲ್ಲಿ ತಂಡೋಪವಾಗಿ ತಂಡವಾಗಿ ಭಕ್ತರು ಮಲ್ಲಿಕಾರ್ಜುನ ದೇವರ ದರ್ಶನ ಪಡೆದರು. ವಿಶೇಷ ಪೂಜಾ ಅಭಿಷೇಕ ಸೇರಿ ಧಾರ್ಮಿಕ ಕೈಂಕರ್ಯಗಳು ನಡೆದವು. ಸಮೀಪದ ತೀರ್ಥಬಾವಿ ಅಮರೇಶ್ವರ ದೇವಸ್ಥಾನಕ್ಕೆ ತೆರಳಿದರು. ಅರ್ಚಕರು ಹಾಗೂ ನೂರಾರು ಭಕ್ತರು ಅಮರೇಶ್ವರನಿಗೆ ಪೂಜೆ ಸಲ್ಲಿಸಿದರು. ಅಲ್ಲಿನ ಹೊಂಡದಲ್ಲಿ ತೀರ್ಥ ತುಂಬಿಕೊಂಡು ಮಲ್ಲಯ್ಯನ ಪಲ್ಲಕ್ಕಿಯು ನೀರಲೂಟಿ, ಅಡವಿಭಾವಿ ತಾಂಡಾ, ಬೆಲ್ಲದಮರಡಿ ಮೂಲಕ ಪಾದಯಾತ್ರೆಯ ಮೂಲಕ ಮಸ್ಕಿಗೆ ತಲುಪಿದರು.

ಪಲ್ಲಕ್ಕಿ ಹಾಗೂ ಕುಂಭವನ್ನು ಪಟ್ಟಣದ ಅಗಸಿಯಲ್ಲಿ ಸಕಲ ವಾದ್ಯಮೇಳದೊಂದಿಗೆ ಮಹಿಳೆಯರು ಕಳಸದೊಂದಿಗೆ ಮುಖ್ಯಬಜಾರ ಮೂಲಕ ವೀರಭದ್ರೇಶ್ವರ ದೇವಸ್ಥಾನ, ಬಸವಣ್ಣ ದೇವಸ್ಥಾನದಿಂದ ತೇರಿನ ಮನೆಯತ್ತ ಸಂಭ್ರಮದಿಂದ ಆಗಮಿಸಿತು.

ಪ್ರಮುಖರಾದ ಮಲ್ಲಪ್ಪ ಕುಡತನಿ, ಪ್ರಕಾಶ ಧಾರಿವಾಲ, ಕೆ.ವೀರನಗೌಡ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಶರಣಯ್ಯ ಸೊಪ್ಪಿಮಠ, ಶಿವಶಂಕ್ರಯ್ಯ ಗಚ್ಚಿನಮಠ, ಶಿವಶಂಕ್ರಯ್ಯ ಪೂಜಾರಿಪೇಟೆ ಇದ್ದರು.

ಗುರು-ಹಿರಿಯರಿಗೆ ಸನ್ಮಾನ

ಮಸ್ಕಿ ಪಟ್ಟನದಲ್ಲಿ ಐದು ದಶಕದ ಹಿಂದೆ ಮುಖ್ಯ ಬಜಾರನಲ್ಲಿ ಶ್ರೀಶೈಲ ಜಗದ್ಗುರುಗಳ ಅಮೃತ ಹಸ್ತದಿಂದ ಮಲ್ಲಿಕಾರ್ಜುನ ದೇವಸ್ಥಾನವನ್ನು ಭಕ್ತರು ಸ್ಥಾಪಿಸಿದ್ದಾರೆ. ದೇವಸ್ಥಾನಕ್ಕೆ 51 ವರ್ಷ ತುಂಬಿದ ಹಿನ್ನೆಲೆಯಲ್ಲಿ ಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಐದು ದಶಕಗಳ ಹಿಂದೆ ದೇವಸ್ಥಾನಕ್ಕೆ ಸೇವೆ ಸಲ್ಲಿಸಿದ ಗುರು-ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net