ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸೋಣ

Untitled design(11)
Published on

ಮಸ್ಕಿ: ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ನೈಜತೆ ಇರಲಿ. ಸುಳ್ಳು ಪ್ರಕರಣಗಳ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್ ಹೇಳಿದರು.

ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಸಮಿತಿ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಠಾಣೆ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಲಾಗುತ್ತಿದೆ. ಹಳ್ಳಿಗಳಲ್ಲಿ ಏನಾದರು ಸಮಸ್ಯೆಗಳಿದ್ದರೆ ಅವುಗಳನ್ನು ಸರಿಪಡಿಸಲು ಪ್ರಯತ್ನ ಮಾಡೋಣ. ಪೊಲೀಸರು ಜನ ಸ್ನೇಹಿಯಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ಮಾತನಾಡಿ, ಸ್ವಾರ್ಥಕ್ಕಾಗಿ ಸಂಘಟನೆಗಳು ಬೇಡ. ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ದಲಿತರ ಮೇಲೆ ನಡೆಯುವ ದೌರ್ಜನ್ಯಗಳು ನಿಲ್ಲಬೇಕು ಹಾಗೂ ರಾತ್ರಿ ಸಮಯದಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಿ ಇದರಿಂದ ಗಲಾಟೆಗಳು ನಡೆಯದಂತೆ ತಡೆಗಟ್ಟಲು ಅನುಕೂಲವಾಗುತ್ತೆ ಎಂದರು.

ಪಿಎಸ್‌ಐ ಮುದ್ದು ರಂಗಸ್ವಾಮಿ, ಸಾಹಿತಿ ದಾನಪ್ಪ ನಿಲೋಗಲ್ ಮಾತನಾಡಿದರು. ಜಿಪಂ ಮಾಜಿ ಸದಸ್ಯ ದೊಡ್ಡಪ್ಪ ಮುರಾರಿ, ಪುರಸಭೆ ಸದಸ್ಯ ಮೌನೇಶ್ ಮುರಾರಿ, ಪ್ರಮುಖರಾದ ತಿಮ್ಮಣ್ಣ ಗುಡಿಸಲಿ, ಮಲ್ಲಯ್ಯ ಬಳ್ಳಾ, ಸಾರಪ್ಪ, ಹನುಮಂತಪ್ಪ ವೆಂಕಟಾಪುರ, ಮೌನೇಶ್ ನಾಯಕ್, ಕಾಸಿಮಪ್ಪ ಡಿ.ಮುರಾರಿ, ಅಶೋಕ ಮುರಾರಿ, ದುರ್ಗರಾಜ್ ವಟಗಲ್, ಬಾಲಸ್ವಾಮಿ ಜಿನ್ನಾಪುರ, ತುರುಮಂದೆಪ್ಪ, ಸಿದ್ದು ಮುರಾರಿ, ಬಸವರಾಜ್ ಉದ್ಬಾಳ್, ಮರಿಸ್ವಾಮಿ ಬೆನಕನಾಳ, ಚಂದ್ರಶೇಖರ ನಾಯಕ ಉದ್ಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net