

ಮಸ್ಕಿ: ಕೊಪ್ಪಳ ಜಿಲ್ಲೆಯ ಸಂಗನಾಳ ಗ್ರಾಮದಲ್ಲಿ ದಲಿತ ಯುವಕ ಯಮನೂರಪ್ಪನನ್ನು ಹತ್ಯೆಗೈದ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಪಟ್ಟಣದಲ್ಲಿ ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳುಗೆ ಮನವಿ ಸಲ್ಲಿಸಿದರು.
ಸ್ವಾತಂತ್ರೃ ಬಂದು 78 ವರ್ಷಗತಿಸಿದರೂ ದಲಿತರ ಮೇಲಿನ ದೌರ್ಜನ್ಯ ನಿಂತಿಲ್ಲ. ಮನುವಾದಿಗಳು ದಲಿತರನ್ನು ಶೋಷಣೆ ಮಾಡುತ್ತಿದ್ದಾರೆ. ಇದರ ಭಾಗವಾಗಿ ಸಂಗನಾಳ ಗ್ರಾಮದಲ್ಲಿ ದಲಿತ ಯುವಕನನ್ನು ಕ್ಷೌರಿಕ ಮುದಕಪ್ಪ ಹಡಪದ ಕೊಲೆ ಮಾಡಿದ್ದಾನೆ. ಇಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವ ದುಷ್ಕರ್ಮಿಗಳನ್ನು ಬಂಧಿಸಬೇಕು. ದಲಿತರಿಗೆ ರಕ್ಷಣೆ ನೀಡುವಲ್ಲಿ ವಿಫಲರಾದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಎಂದು ಸಾಹಿತಿ ಸಿ.ದಾನಪ್ಪ ಒತ್ತಾಯಿಸಿದರು.