ಬಾಕಿ ಗೌರವ ಧನ ಬಿಡುಗಡೆ ಮಾಡಿ

08112022 maski Akshara Dasoha Scheme workers manavi
Published on

ಮಸ್ಕಿ: ಅಕ್ಷರ ದಾಸೋಹ ಯೋಜನೆಯ ಮುಖ್ಯ ಮತ್ತು ಸಹಾಯಕ ಅಡುಗೆಯವರಿಗೆ 3 ತಿಂಗಳ ಬಾಕಿ ವೇತನ ಪಾವತಿಸುವಂತೆ ತಹಸೀಲ್ದಾರ್ ಕವಿತಾ ಆರ್.ಗೆ ಸಿಐಟಿಯು ಸಂಯೋಜಿತ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡೇರೇಷನ್‌ನಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ಅಡುಗೆದಾರರು ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಸರಿಯಾದ ರೀತಿಯಲ್ಲಿ ಮಾಸಿಕ ವೇತನ ಬಿಡುಡಗೆಯಾಗುತ್ತಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟಕರವಾಗಿದ್ದು, ಕೂಡಲೇ ಸರ್ಕಾರ ಬಾಕಿ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ವೇತನ ಪಾವತಿಯಲ್ಲಿ ಆಗುತ್ತಿರುವ ತೊಂದರೆಗಳನ್ನು ಸರ್ಕಾರ ಪರಿಹರಿಸಬೇಕು. ಅಡುಗೆ ಸಾಮಗ್ರಿ ಮತ್ತು ತರಕಾರಿ ಬಾಕಿ ಬಿಡುಗಡೆ ಮಾಡಬೇಕು. ಬಿಸಿಯೂಟ ತಯಾರಕರಿಗೆ 2 ಲಕ್ಷ ರೂ ಅಪಘಾತ ವಿಮೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net