

ಮಸ್ಕಿ: ಜಗದ್ಗುರು ರೇಣುಕಾಚಾರ್ಯರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಭಾವಚಿತ್ರದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆಯಿತು.
ಪಟ್ಟಣದ ಗಚ್ಚಿನಮಠದಲ್ಲಿ ಬೆಳಗ್ಗೆ ಕತೃಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ನಂತರ ಮಹಾಮಂಗಳಾರತಿ ಮತ್ತು ಪಂಚಾಚಾರ್ಯರ ಧ್ವಜಾರೋಹಣ ನೆರವೇರಿಸಲಾಯಿತು. ಜಗದ್ಗುರು ರೇಣುಕಾಚಾರ್ಯರ ಅಲಂಕೃತ ಭಾವಚಿತ್ರಕ್ಕೆ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಸುಮಂಗಲೆಯರ ಕಳಸಾರೋಹಣದೊಂದಿಗೆ ಮೆರುಗು ತಂದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ್ರಮುಖರಾದ ಅಂದಾನಪ್ಪ ಗುಂಡಳ್ಳಿ, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಮಲ್ಲಪ್ಪ ಕುಡತಿನಿ, ಸಿದ್ದಲಿಂಗಯ್ಯ ಗಚ್ಚಿನಮಠ, ಚೆನ್ನಪ್ಪ ಬ್ಯಾಳಿ, ಬಸನಗೌಡ ಪೋ.ಪಾಟೀಲ್, ಘನಮಠದಯ್ಯ ಸಾಲಿಮಠ, ಎನ್.ಶಿವಕುಮಾರ, ಮಹಾಂತೇಶ ಮಸ್ಕಿ, ಕರಿಬಸಯ್ಯ ಸಿಂಧನೂರಮಠ, ಆದಯ್ಯಸ್ವಾಮಿ ಕ್ಯಾತ್ನಟ್ಟಿ, ಸಿದ್ದಲಿಂಗಯ್ಯ ಸೊಪ್ಪಿಮಠ, ಸುಕುಮುನಿಯಪ್ಪ ನಾಯಕ, ಸೂಗಣ್ಣ ಬಾಳೆಕಾಯಿ, ಮಲ್ಲಿಕಾರ್ಜುನ ಕಂದಗಲ್, ವೆಂಕಟರೆಡ್ಡಿ ಹೂವಿನಭಾವಿ, ಶರಣಯ್ಯ ಸೊಪ್ಪಿಮಠ, ನಾಗರಾಜ ಯಂಬಲದ, ಮೌನೇಶ ನಾಯಕ, ತಿಪ್ಪಣ್ಣ ಯಂಬಲದ, ಪ್ರಸನ್ನ ಪಾಟೀಲ್ ಸೇರಿದಂತೆ ಇತರರಿದ್ದರು.