ರಕ್ತದಲ್ಲಿ ರಾಷ್ಟ್ರಪತಿಗೆ ಪತ್ರ ಬರೆದ ಗೃಹರಕ್ಷಕ

21062020 Maski Blood Letter
Published on

ಮಸ್ಕಿ (ರಾಯಚೂರು): ಚೀನಾ ಮತ್ತು ಭಾರತದ ನಡುವೆ ಯುದ್ಧ ನಡೆದರೆ ಯುದ್ಧದಲ್ಲಿ ಭಾಗವಹಿಸಲು ನನಗೆ ಅವಕಾಶ ಕೊಡಿ ಎಂದು ರಾಷ್ಟ್ರಪತಿಗೆ ರಕ್ತದಲ್ಲಿ ಪತ್ರ ಬರೆದು ಪಟ್ಟಣದ ಹೋಂ ಗಾರ್ಡ್ ಲಕ್ಷ್ಮಣ ಮಡಿವಾಳ ಮನವಿ ಮಾಡಿದ್ದಾರೆ.

ಚೀನಾ ಹುಚ್ಚಾಟದಿಂದ ಕುಪಿತನಾದ ಲಕ್ಷ್ಮಣ, ಶನಿವಾರ ಬೆಳಗ್ಗೆ ವೈದ್ಯರ ಸಹಾಯದಿಂದ ರಕ್ತ ಪಡೆದು, ಅದರಿಂದ ಪತ್ರ ಬರೆದಿದ್ದಾರೆ. ‘ನನ್ನ ದೇಶದ ರಕ್ಷಣೆ ನನ್ನ ಕರ್ತವ್ಯ. ಭಾರತದ ಯೋಧರ ಬಲಿದಾನ ವ್ಯರ್ಥವಾಗಬಾರದು. ಅದಕ್ಕಾಗಿ ಯುದ್ಧ ನಡೆದರೆ ನಾನು ಪಾಲ್ಗೊಳ್ಳಲು ಸಿದ್ಧನಿದ್ದೇನೆ’ ಎಂದು ಪತ್ರದಲ್ಲಿ ಬರೆದಿದ್ದಾರೆ. ಇವರು ಸುಮಾರು 200 ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್, ಕನ್ನಡ ವ್ಯಾಕರಣ, ಗಣಿತ, ವಿಜ್ಞಾನ ವಿಷಯಗಳ ಜತೆ ಗ್ರಾಮೀಣ ಕ್ರೀಡೆಗಳಲ್ಲಿ ಮಕ್ಕಳನ್ನು ತರಬೇತಿ ಗೋಳಿಸುತ್ತಿದ್ದಾರೆ. ಮಕ್ಕಳಿಗೆ ದೇಶಪ್ರೇಮದ ಕಥೆಗಳನ್ನು ಹೇಳಿ, ದೇಶ ಕಾಯುವ ಸೈನಿಕರಾಗುವಂತೆ ಪ್ರೇರೇಪಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net