

ಮಸ್ಕಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ನಾಗಭೂಷಣ ಬಾರಕೇರ್, ಉಪಾಧ್ಯಕ್ಷೆಯಾಗಿ ನಿರ್ಮಲಾ ಗಣಚಾರಿ ಗುರುವಾರ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ನಾಗಭೂಷಣ ಬಾರಕೇರ್, ದುರುಗಪ್ಪ ಗೋನ್ವಾರ, ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಲಾ ಗಣಚಾರಿ, ಶರಣಪ್ಪಗೌಡ ಪಾಟೀಲ ನಾಮಪತ್ರ ಸಲ್ಲಿಸಿದ್ದರು. ಸಂಘಕ್ಕೆ 12 ಸದಸ್ಯರಿದ್ದಾರೆ. ನಾಗಭೂಷಣ ಬಾರಕೇರ್ ಹಾಗೂ ನಿರ್ಮಲಾ ಗಣಚಾರಿ ತಲಾ 8 ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆಂದು ಚುನಾವಣಾಧಿಕಾರಿ ಬಸಪ್ಪ ಕಣೀಕೆದಾರ್ ಘೋಷಿಸಿದರು.
ಕಳೆದ 20 ವರ್ಷಗಳಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ ಚುನಾವಣೆ ನಡೆದಿದೆ. ಶಾಸಕ ಆರ್.ಬಸನಗೌಡ ತುರ್ವಿಹಾಳ, ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ, ನಿರುಪಾದೆಪ್ಪ ವಕೀಲ ಗುಡಿಹಾಳ, ಶಿವು ಬ್ಯಾಳಿ, ಮಾಹಾಂತೇಶ ಜಾಲವಾಡಗಿ,ಮಲ್ಲನಗೌಡ ಮಾಟೂರು, ಬಿ.ಜಿ.ನಾಯಕ, ಕೃಷ್ಣ ಚಿಗರಿ, ಮಲ್ಲಯ್ಯ ಮುರಾರಿ ಇತರರಿದ್ದರು.