ಫೆ.25ರಂದು ಶಿವಾಜಿ ಜಯಂತ್ಯುತ್ಸವ

ರಾಕೇಶ ಪಾಟೀಲ್
Published on

ಮಸ್ಕಿ: ಪಟ್ಟಣದಲ್ಲಿ ಫೆ.25 ರಂದು ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದಿಂದ ಜಂಟಿಯಾಗಿ ಆಚರಿಸಲಾಗುವುದು ಎಂದು ಬಜರಂಗದಳದ ತಾಲೂಕು ಸಂಯೋಜಕ ರಾಕೇಶ ಪಾಟೀಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ಶಿವಾಜಿ ಭಾವಚಿತ್ರವನ್ನು ತೇರು ಬಜಾರಿನಿಂದ ದೈವದ ಕಟ್ಟೆ, ಖಲೀಲ್ ವೃತ್ತ, ಅಗಸಿ, ಅಶೋಕ ವೃತ್ತ, ಕನಕವೃತ್ತದ ಮೂಲಕ ತೇರು ಬಜಾರವರೆಗೆ ಮೆರವಣಿಗೆ ನಡೆಸಲಾಗುವುದು. ಸಂಜೆ 4ಕ್ಕೆ ತೇರಿನ ಮನೆಯ ಮುಂದೆ ಬಹಿರಂಗಸಭೆ ಆಯೋಜಿಸಿದ್ದು, ಹಿಂದುಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು. ಪ್ರಮುಖರಾದ ಹುಸೇನಪ್ಪ ಬಾರಕೇರ್, ಕಿರಣಕುಮಾರ ದುರ್ಗಾಕ್ಯಾಂಪ್, ರವಿಕುಮಾರ, ಅಮರೇಶಪ್ಪ ಬ್ಯಾಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net