ಕಲ್ಯಾಣ ಕರ್ನಾಟಕ ದಾರ್ಶನಿಕರ ನಾಡು

Maski book release
ಮಸ್ಕಿಯಲ್ಲಿ ‘ನೀರಲಕೇರಿಯ ಶಿವಗ್ಯಾನಪ್ಪನ ವಚನಗಳು’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಲಾಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಲೇಖಕ ಶಿವಗ್ಯಾನಪ್ಪ, ಡಾ.ಖಾಜವಲಿ ಈಚನಾಳ, ಪತ್ರಕರ್ತ ವೀರೇಶ ಸೌದ್ರಿ ಪ್ರಾಚಾರ್ಯ ಡಾ. ಮಹಾಂತಗೌಡ ಪಾಟೀಲ ಇತರರಿದ್ದರು.
Published on

ಮಸ್ಕಿ: ಅಕ್ಷರ ಮತ್ತು ಪುಸ್ತಕಗಳು ತಾಯತನವನ್ನು ಕಲಿಸುತ್ತವೆ. ಲೇಖಕರಾದವರು ಜಾತಿ ವ್ಯವಸ್ಥೆಯನ್ನು ಮೀರಬೇಕು ಎಂದು ಕಲಬುರ್ಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಹೇಳಿದರು.

ಪಟ್ಟಣದ ದೇವನಾಂಪ್ರಿಯ ಅಶೋಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನೀರಲಕೇರಿಯ ಶಿವಗ್ಯಾನಪ್ಪನ ವಚನಗಳು’ ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ಶರಣರನ್ನು, ದಾಸರನ್ನು, ಸಂತರನ್ನು ದಾರ್ಶಕನಿಕರನ್ನು ನಾಡಿಗೆ ನೀಡಿದ ಪುಣ್ಯಭೂಮಿ ಇದಾಗಿದೆ. ಈ ನೆಲದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ ಆದರೆ ಅವರಿಗೆ ಅವಕಾಶಗಳಿಲ್ಲ. ಅವಕಾಶಗಳಿಗಾಗಿ ಕಾಯದೆ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು.

ಕರ್ನಾಟಕದ ಎಲ್ಲ ಮುಖ್ಯಮಂತ್ರಿಗಳು ಬಸವ ತತ್ವ ಪಾಲಿಸಿದ್ದರೆ ಜಾತಿ ವ್ಯವಸ್ಥೆ ಇರುತ್ತಿರಲಿಲ್ಲ. ಭ್ರಷ್ಟಾಚಾರ ಇರುತ್ತಿರಲಿಲ್ಲ. ನಿಜವಾದ ಕಲ್ಯಾಣವಾಗುತ್ತಿತ್ತು ಎಂದರು.

ಚಿಂಚೋಳಿಯ ನಿವೃತ್ತ ಪ್ರಾಚಾರ್ಯ ಡಾ.ಶ್ರೀಶೈಲ ನಾಗರಾಳ ಪುಸ್ತಕ ಕುರಿತು ಮಾತನಾಡಿ, ಮನುಷ್ಯನನ್ನು ಪ್ರೀತಿಸುವ ಮನಸ್ಸುಗಳು ಸಂಕುಚಿತವಾಗಿವೆ. ಪ್ರೀತಿಯ ಹಂಬಲದ ಬಗ್ಗೆ ಕವಿಗಳು ಆಧುನಿಕ ವಚನಗಳಲ್ಲಿ ನಿವೇದಿಸಿಕೊಂಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net