

ಮಸ್ಕಿ: ಪಟ್ಟಣದ ಜೆಸ್ಕಾಂ ನಿವೃತ್ತ ನೌಕರ ಮಲ್ಲಪ್ಪ ನಾಯಿಕೊಡಿ ಅವರ ಮೊಮ್ಮಗ ಸಂತೋಷನ ಮದುವೆ ಭಾನುವಾರ ಸರಳವಾಗಿ ನೆರವೇರಿತು.
ಮದುವೆಗೆ ಆಗಮಿಸಬೇಕಾಗಿದ್ದ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿಡಿಯೋ ಕಾಲ್ ಮಾಡಿ ವಧು-ವರನಿಗೆ ಆಶೀರ್ವದಿಸಿದರು. ಮದುವೆಗೆ ಆಗಮಿಸಿದವರೆಲ್ಲ ಮಾಸ್ಕ್ ಧರಿಸಿದ್ದರು. ಮತ್ತು ಅಂತರ ಕಾಯ್ದುಕೊಂಡಿದ್ದು ವಿಶೇಷವಾಗಿತ್ತು.