

ಮಸ್ಕಿ: ಪುರಸಭೆ ಆಡಳಿತ ಮಂಡಳಿ ತಾಲೂಕಿನ ಹೂವಿನಬಾವಿ ಬಳಿ ತ್ಯಾಜ್ಯ ವಿಲೇವಾರಿ ಘಟಕ ಘಟಕ ಸ್ಥಾಪನೆಗೆ ಮುಂದಾಗಿದ್ದನ್ನು ವಿರೋಧಿಸಿ ವಿವಿಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ಮನವಿ ಸ್ಲಲಿಸಿದರು.
ಗ್ರಾಮಸ್ಥ ನಾಗರಡ್ಡೆಪ್ಪ ದೇವರಮನಿ ಮಾತನಾಡಿ, ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದರಿಂದ ಪರಿಸರ ಹಾಳಾಗಲಿದ್ದು, ಗ್ರಾಮಸ್ಥರ ಆರೋಗ್ಯದೆ ಮೇಲೂ ದುಷ್ಪರಿಣಾಮ ಬೀರಲಿದೆ. ಮಸ್ಕಿಯಿಂದ 12 ಕೀಮೀ ದೂರದಲ್ಲಿ ಘಟಕ ಸ್ಥಾಪಿಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಘಟಕ ಸ್ಥಾಪನೆ ಕೈಬಿಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಹೂವಿನಬಾವಿ, ಬುದ್ದಿನ್ನಿ ಎಸ್, ಬಸಾಪುರ, ಮುದಬಾಳ, ಬೆಂಚಮರಡಿ, ಇಲಾಲಪುರ, ಹರ್ವಾಪುರ, ತುಪ್ಪದೂರು ಗ್ರಾಮಸ್ಥರು ಇದ್ದರು.