

ಮಸ್ಕಿ: ಇತ್ತೀಚೆಗೆ ಸಂಚಾರಿ ಕುರಿಗಾಹಿಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗತೊಡಗಿದ್ದು, ಇದರ ನಿಯಂತ್ರಣಕ್ಕೆ ಕೂಡಲೇ ಸರ್ಕಾರ ಸಂಚಾರಿ ಕುರಿಗಾಹಿಗಳ ಹಿತರಕ್ಷಣೆ ಕಾಯ್ದೆ ಜಾರಿಗೊಳಿಸಬೇಕೆಂದು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜ ವಕೀಲ ಡೋಣಮರಡಿ ಒತ್ತಾಯಿಸಿದರು.
ಪಟ್ಟಣದ ಕನಕ ವೃತ್ತದಿಂದ ತಹಸಿಲ್ ಕಚೇರಿವರೆಗೆ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿ, ಉಪ ತಹಸೀಲ್ದಾರ್ ಪ್ರಕಾಶ ಬುಳ್ಳಾಗೆ ಮನವಿ ಸಲ್ಲಿಸಿದರು. ಸಂಚಾರಿ ಕುರಿಗಾಹಿಗಳ ರಕ್ಷಣೆಗೆ ಬಂದೂಕು ಪರವಾನಗಿ ನೀಡಬೇಕು. ಮಕ್ಕಳನ್ನು ವಸತಿ ಶಾಲೆಯಲ್ಲಿ ಸೇರಿಸಲು ನಿರ್ದಿಷ್ಟ ಮೀಸಲಾತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ನಂತರ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಮನವಿ ಸಲ್ಲಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕಡಬೂರು, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ದುರುಗೇಶ ವಕೀಲ, ಮಲ್ಲನಗೌಡ ಸುಂಕನೂರು, ಕರಿಯಪ್ಪ ಹಾಲಾಪುರ, ಶ್ರೀನಿವಾಸ ಏಗನೂರು, ಮಲ್ಲಯ್ಯ, ಬಸಪ್ಪ ಗೌಡನಬಾವಿ, ಮಲ್ಲರೆಡ್ಡಪ್ಪ ಜಕ್ಕೆರಮಡು, ಮಳ್ಳಪ್ಪ ಮಸ್ಕಿ, ಅಮರೇಶ ಕ್ಯಾತ್ನಟ್ಟಿ, ಕರಿಯಪ್ಪ ಯಕ್ಸಲಾಪುರ, ಡಾ.ಶಿವರಾಜ ಸಂತೆಕೆಲ್ಲೂರು, ರವಿ ದೇಸಾಯಿ ಹಾಲಪುರ ಇತರರಿದ್ದರು.