ಮಸ್ಕಿ ನಾಲಾ ಜಲಾಶಯದಲ್ಲಿ ಬಾಗಿನ ಸಮರ್ಪಣೆ

04082020 Maski Bagina dedication
Published on

ಮಸ್ಕಿ: ಮಾರಲದಿನ್ನಿ ಬಳಿಯ ಮಸ್ಕಿ ನಾಲಾ ಜಲಾಶಯಕ್ಕೆ (ಘನಮಠೇಶ್ವರ ಜಲಾಶಯ) ಬ್ಲಾಕ್ ಕಾಂಗ್ರೆಸ್‌ನ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಗ್ರಾಮೀಣ ಘಟಕ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ರೈತರು ಸೋಮವಾರ ಬಾಗಿನ ಸಲ್ಲಿಸಿದರು.

ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, 3-4 ವರ್ಷಗಳಿಂದ ಸರಿಯಾಗಿ ಮಳೆ ಬಂದಿರಲಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸಿದ್ದಾರೆ. ಜಾನುವಾರುಗಳಿಗೆ ಮೇವು-ನೀರಿಲ್ಲದೇ ಸಂಕಷ್ಟಕ್ಕೆ ಗುರಿಯಾಗಿದ್ದರು. ಈ ಬಾರಿ ಮಳೆ ಬಂದು ಜಲಾಶಯ ಭರ್ತಿಯಾಗಿದೆ. ಭಗವಂತ ಉತ್ತಮ ಬೆಳೆಯನ್ನೂ ದಯಪಾಲಿಸಲಿ ಎಂದರು.

ಪ್ರಮುಖರಾದ ತಿಮ್ಮಯ್ಯ ನಾಯಕ, ಶ್ರೀಶೈಲಪ್ಪ ಬ್ಯಾಳಿ, ರಾಘವೇಂದ್ರ ನಾಯಕ, ಮಹಿಬೂಬ್‌ಸಾಬ್ ಮುದ್ದಾಪೂರು, ಬಸನಗೌಡ ಮುದಾಬಾಳ, ಡಾ.ರಹೀಮ್ ಪಟೇಲ್, ಹನುಮೇಶ ಬಾಗೋಡಿ, ದುರ್ಗೇಶ, ಆನಂದ ವಿರಾಪೂರ, ಶರಣಪ್ಪ ಎಲೆಗಾರ, ಸುರೇಶ ಖೈರವಾಡಗಿ, ರಾಜು ನಧಾಪ್ ಇತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net