ಗುರಿ ಸಾಧನೆಗೆ ಏಕಾಗ್ರತೆ-ಛಲ ಅಗತ್ಯ

Untitled design (40)
ಮಸ್ಕಿ ಪಟ್ಟಣದ ಅಭಿನಂದನ್ ಸ್ಪೂರ್ತಿಧಾಮ ಅನಾಥ ಮಕ್ಕಳ ಕುಟೀರಕ್ಕೆ ಲೋಕಸಭಾ ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ಭೇಟಿ ನೀಡಿದರು. ತಹಸೀಲ್ದಾರ್ ಅರಮನೆ ಸುಧಾ, ಗ್ರೇಡ್-2 ತಹಸೀಲ್ದಾರ್ ರಾಘವೇಂದ್ರ, ಶಿಕ್ಷಕರಾದ ಮಹಾಂತೇಶ, ಬಸವರಾಜ ರತ್ನಾಪುರ, ರಾಮಣ್ಣ ಹಂಪರಗುಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
Published on

ಮಸ್ಕಿ: ವಿದ್ಯಾರ್ಥಿಗಳು ಗುರಿ ಸಾಧಿಸಲು ಸತತ ಪರಿಶ್ರಮ ಪಡಬೇಕು ಎಂದು ಲೋಕಸಭಾ ಚುನಾವಣಾಧಿಕಾರಿ ಜಗದೀಶ ಗಂಗಣ್ಣನವರ್ ಹೇಳಿದರು.
ಪಟ್ಟಣದ ಅಭಿನಂದನ್ ಸ್ಫೂರ್ತಿಧಾಮ ಅನಾಥ ಮಕ್ಕಳ ಕುಟೀರಕ್ಕೆ ಮಂಗಳವಾರ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಕ್ಕಳೊಂದಿಗೆ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು. ಓದುವ ರೀತಿ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದರು.
ತಹಸೀಲ್ದಾರ್ ಅರಮನೆ ಸುಧಾ, ಗ್ರೇಡ್-2 ತಹಸೀಲ್ದಾರ ರಾಘವೇಂದ್ರ, ಶಿಕ್ಷಕರಾದ ಮಹಾಂತೇಶ, ಬಸವರಾಜ ರತ್ನಾಪುರ, ರಾಮಣ್ಣ ಹಂಪರಗುಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net