

ಮಸ್ಕಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸರ್ಕಾರ ಮಹತ್ವಾಕಾಂಕ್ಷೆಯ ಭೂ ಸುರಕ್ಷಾ ಯೋಜನೆಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಬುಧವಾರ ಚಾಲನೆ ನೀಡಿದರು. ತಾಲೂಕು ಕಚೇರಿಯಲ್ಲಿ ಎ ವರ್ಗ ಮತ್ತು ಬಿ ವರ್ಗದ ಎಲ್ಲ ಕಡತಗಳನ್ನು ಸ್ಕಾೃನಿಂಗ್ ಮಾಡಿ ಗಣಕೀಕರಣಗೊಳಿಸಬೇಕು. ಇದರಿಂದ ರೈತರ ಹಿತ ಕಾಪಾಡಿದಂತಾಗಲಿದೆ. ಅಧಿಕಾರಿಗಳು ನಿರ್ಲಕ್ಷೃ ಮಾಡದೆ ಕರ್ತವ್ಯ ನಿರ್ವಹಿಸಲಿ ಎಂದು ಆರ್.ಬಸನಗೌಡ ತುರ್ವಿಹಾಳ ಹೇಳಿದರು.
ತಹಸೀಲ್ದಾರ್ ಡಾ.ಕೆ.ಮಲ್ಲಪ್ಪ ಯರಗೋಳ ಮಾತನಾಡಿ, ಸರ್ಕಾರದ ಯೋಜನೆ ಯಶಸ್ವಿಗೆ ಸಿಬ್ಬಂದಿ ಬದ್ಧವಾಗಿದ್ದಾರೆ. ಎಲ್ಲ ದಾಖಲೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು.