

ಮಸ್ಕಿ: ಪಟ್ಟಣದ ಕುರುಹಿನ ಶೆಟ್ಟಿ ಸಮಾಜದ ನೀಲಕಂಠೇಶ್ವರ ದೇವಸ್ಥಾನದ 50ನೇ ವರ್ಷದ ಸುವರ್ಣ ಮಹೋತ್ಸವ ಅಂಗವಾಗಿ ಬುಧವಾರ ದೇವರಿಗೆ ಬೆಳಗ್ಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೀಲಕಂಠೇಶ್ವರ ಭಾವಚಿತ್ರ, ಗಂಗಾಸ್ಥಳದಿಂದ ಕುಂಭಗಳ ಹೊತ್ತ ಮಹಿಳೆಯರು ಸಮುದಾಯದ ಕುಲಗುರುಗಳಾದ ನೀಲಕಂಠ ಸ್ವಾಮೀಜಿ ಅವರ ಮೆರವಣಿಗೆ ನಡೆಯಿತು. ಡೊಳ್ಳು ಬಾಜಾಬಜಂತ್ರಿ ಮಹಿಳೆಯರ ಮತ್ತು ಮಕ್ಕಳು ಕೋಲಾಟ ಗಮನ ಸೆಳೆಯಿತು.
ಸಮುದಾಯದ ತಾಲೂಕು ಅಧ್ಯಕ್ಷ ಈಶಪ್ಪ, ಗಂಗಾವತಿ ಪ್ರಮುಖರಾದ ಬಸವರಾಜಪ್ಪ ಕಲ್ಲೂರು, ಅಮರೇಶ ಜೋತಾನ್, ವಿರುಪಾಕ್ಷಪ್ಪ ಪರಕಾಳಿ, ಬಸವರಾಜ ದಿನ್ನಿ, ಸಂಗಮೇಶ ಕೊಳ್ಳಿ, ಸಂಗಮೇಶ ಸಾವಿ, ಮಂಜುನಾಥ ಗೊಗ್ಗಲ್ ಇದ್ದರು.