ಕಳಪೆ ಜೆಜೆಎಂ ಕಾಮಗಾರಿ ವಿರುದ್ಧ ಕ್ರಮ ಕೈಗೊಳ್ಳಿ

Untitled design(15)
Published on

ಮಸ್ಕಿ: ತಾಲೂಕಿನ ಕೊಟೆಕಲ್ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಕಳಪೆಯಾಗಿದ್ದು, ಕ್ರಮ ಕೈಗೊಳ್ಳಲು ಒತ್ತಾಯಿಸಿ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಇಲ್ಲಿನ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಮಾನ್ವಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಸತೀಶಗೆ ಮಂಗಳವಾರ ಮನವಿ ಸಲ್ಲಿಸಿದರು .

ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ಕೊಟೆಕಲ್ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಕಾಮಗಾರಿಯನ್ನು ಎಸ್ಟಿಮೆಂಟ್ ಪ್ರಕಾರ ನಿರ್ವಹಿಸದೇ ಬೇಕಾಬಿಟ್ಟಿ ನಡೆಸಲಾಗಿದೆ. ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಈ ಯೋಜನೆಯ ನೀತಿ ನಿಯಮಗಳನ್ನು ಪಾಲಿಸಿಲ್ಲ. ತಮಗೆ ಇಷ್ಟ ಬಂದಂತೆ ಆಳ ಮತ್ತು ಅಗಲದ ಮಾಪನ ಮಾಡದೆ ನೀರಿನ ಪೈಪುಗಳನ್ನ ಊರಿನ ಮುಖ್ಯರಸ್ತೆಯಲ್ಲಿ ಹಾಕುತ್ತಿದ್ದಾರೆ. ಈ ಪೈಪುಗಳು ಅಲ್ಲಲ್ಲಿ ಒಡೆದು ಹಾಳಾಗಿ ಹೋಗಿವೆ. ಅಲ್ಲದೆ ನಲ್ಲಿಗಳ ಪೈಪುಗಳು ಕಳಪೆಯಾಗಿವೆ. ಕಾಮಗಾರಿ ಆರಂಭಿಸುವ ಪೂರ್ವದಲ್ಲಿ ಕಾಮಗಾರಿ ನಾಮಫಲಕ, ಯೋಜನೆ ಗುರಿ ಉದ್ದೇಶ ಇಲಾಖೆ, ಅಧಿಕಾರಿಗಳು, ಗುತ್ತಿಗೆದಾರರ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಹಾಕದೆ ಮನಬಂದಂತೆ ಕಾಮಗಾರಿ ಆರಂಭಿಸಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್ ಪಕ್ಷದ ಪ್ರಮುಖ ನೀರುಪಾದಿ ಗೋಮರ್ಸಿ, ರಾಯಚೂರು ಜಿಲ್ಲಾ ಉಪಾಧ್ಯಕ್ಷ ಬಸವಪ್ರಭು ಮೇದ, ಪ್ರಮುಖರಾದ ಅಂಬರೀಶ್ ನಾಯಕ್, ಜಿ.ವೆಂಕಟೇಶ್, ರಮೇಶ್ ನಾಯಕ್, ಪಂಪಾಪತಿ ಹಡಪದ್, ವೀರೇಶ್ ಕುರುಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net