ಮಸ್ಕಿಯಲ್ಲಿ ಕಟ್ಟೆ ದುರ್ಗಾದೇವಿ ರಥೋತ್ಸವ

12-msk-2
Published on

ಮಸ್ಕಿ: ಪಟ್ಟಣದಲ್ಲಿ ಕಟ್ಟೆ ದುರ್ಗಾದೇವಿ ರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ದುರ್ಗಾದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆಯಿಂದ ಭಕ್ತರು ಸಾಲುಗಟ್ಟಿ ದೇವಿಯ ದರ್ಶನ ಪಡೆದರು. ಸಂಜೆ ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಪ್ರತಿಷ್ಠಾಪಿಸಲಾಯಿತು. ನಂತರ ಹೂವಿನಿಂದ ಅಲಂಕೃತಗೊಂಡಿದ್ದ ರಥವನ್ನು ಮಹಿಳಾ ಭಕ್ತರು ಸಂತೆ ಬಜಾರನಲ್ಲಿನ ಕಾಳಮ್ಮ ದೇವಸ್ಥಾನದ ಪಾದಗಟ್ಟೆಯವರೆಗೂ ಸಂಭ್ರಮದಿಂದ ಎಳೆದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪ್ರಮುಖರಾದ ಮಹಾದೇವಪ್ಪಗೌಡ ಪೊ.ಪಾ., ಪಂಪಣ್ಣ ಅಂತರಗಂಗಿ, ಅಂದಾನಪ್ಪ ಗುಂಡಳ್ಳಿ, ಡಾ.ಪಂಚಾಕ್ಷರಯ್ಯ, ಅಪ್ಪಾಜಿಗೌಡ, ಶ್ರೀಶೈಲಪ್ಪ ಬ್ಯಾಳಿ, ಶಿವಶಂಕ್ರಪ್ಪ ಹಳ್ಳಿ, ರಾಜನಾಯ್ಕ, ಯಮನೂರಪ್ಪ ಭೋವಿ, ಮೌನೇಶ ನಾಯಕ, ಶರಣಬಸವ ಸೊಪ್ಪಿಮಠ, ಬಾಲಾಜಿ ನಾಯಕ, ಅಶೋಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net