

ಕಾರ್ಗಿಲ್ ವಿಜಯೋತ್ಸವ ಆಚರಣೆ
ಮಸ್ಕಿ: ಪಟ್ಟಣದ ಸಜ್ಜಿ ಹೊಲದಲ್ಲಿರುವ ಪುರಾತನ ಕಲ್ಯಾಣಿ (ಬಾವಿ) ಅಭಿವೃದ್ಧಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ಸಹಾಯ ಮಾಡುವುದಾಗಿ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಭರವಸೆ ನೀಡಿದರು.
ಪಟ್ಟಣದ ತುಗಂಭದ್ರಾ ಎಡದಂಡೆ ನಾಲೆ ಬಳಿಯ ಸಜ್ಜಹೊಲಕ್ಕೆ ಭಾನುವಾರ ತೆರಳಿ ಬಾವಿ ಸ್ವಚ್ಛತಾ ಕಾರ್ಯ ವಿಕ್ಷೀಸಿ, ಮಾತನಾಡಿದರು. ಈ ಪ್ರದೇಶದಲ್ಲಿ ಮನೆಗಳು ನಿರ್ಮಾಣವಾಗಿವೆ. ಈ ಭಾಗದಲ್ಲಿದ್ದ ಪುರಾತನ ಬಾವಿ ಹಾಳು ಬಿದ್ದಿದೆ. ಯುವ ಬ್ರಿಗೇಡ್‌ನವರು 3 ಭಾನುವಾರಗಳಂದ ಶ್ರಮದಾನ ಮಾಡುತ್ತ ಪುನಶ್ಚೇತನಗೊಳಿಸುತ್ತಿದ್ದಾರೆ. ಇದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ಕಾರ್ಗಿಲ್ ವಿಜಯೋತ್ಸವ: ಸಜ್ಜಿ ಹೊಲದಲ್ಲಿರುವ ಕಲ್ಯಾಣಿ ಮುಂಭಾಗ ಬ್ರಿಗೇಡ್ ಯುವಕರುಕಾರ್ಗಿಲ್ ವಿಜಯೋತ್ಸವ ಆಚರಿಸಿ, ಮಾಜಿ ಸೈನಿಕ ರಾಚಪ್ಪ ಅವರನ್ನು ಸತ್ಕರಿಸಿದರು. ಡಾ.ಮಲ್ಲಿಕಾರ್ಜುನ ಇತ್ಲಿ ಮಾತನಾಡಿ, ಪ್ರತಿಯೊಬ್ಬರೂ ದೇಶ ಸೇವೆ ಮಾಡವ ಅವಕಾಶ ಕಳೆದುಕೊಳ್ಳಬಾರದು. ನಮ್ಮನ್ನು, ದೇಶವನ್ನು ಕಾಯುವವರು ದೇವರಿಗೆ ಸಮಾನ ಎಂದರು. ಕಾರ್ಯಕರ್ತರಾದ ಪ್ರಸನ್ನ ಪಾಟೀಲ, ನಾಗರಾಜ ಯಂಬಲದ, ಶರಣಯ್ಯ ಸೊಪ್ಪಿಮಠ, ಮೌನೇಶ ನಾಯಕ, ಅಮರೇಶ ಹರಸೂರು, ಸುಮಂತ್, ಗಂಗಾಧರ್ ಕಂಬಳಿಮಠ ಇತರರು ಇದ್ದರು.