ನೀರಾವರಿ ಯೋಜನೆ ಜಾರಿಗೆ ಬದ್ಧ

24.ktal.02 - Copy
Published on

ಕವಿತಾಳ: ಮಸ್ಕಿ ಕ್ಷೇತ್ರದ ಅಭಿವೃದ್ದಿಗಾಗಿ ಈ ಸಲ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಪಾಮನಕಲ್ಲೂರು ಭಾಗದಲ್ಲಿನ ಬಿಜೆಪಿ ನಾಯಕ ಬಾಬುಗೌಡ ಹಿಲಾಲಪೂರ ಹೇಳಿದರು.

ಗ್ರಾಮದಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಮನಕಲ್ಲೂರು ಭಾಗ ನೀರಾವರಿಯಿಂದ ವಂಚಿತವಾಗಿದ್ದು, ನೀರಾವರಿ ಜಾರಿಮಾಡುವ ಉದ್ದೇಶದಿಂದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು. ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಮಾತನಾಡಿ, ನೀರಾವರಿ ಯೋಜನೆ ಜಾರಿಗೆ ಬದ್ಧನಾಗಿದ್ದೇನೆ. ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಮಾಡುವ ಮುಖಾಂತರ ರೈತರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಬೇರೆಯವರಂತೆ ಸುಳ್ಳು ಹೇಳಿ ನಾನು ಆಯ್ಕೆಯಾಗಬಹುದಾಗಿತ್ತು. ಆದರೆ, ರೈತರಿಗೆ ಈಗ ಸತ್ಯದ ಅರಿವಾಗಿದೆ ಎಂದರು. ತಾಪಂ ಮಾಜಿ ಸದಸ್ಯ ಸಂತೋಷ ರಾಜಗುರು, ಸಂಗಪ್ಪ ಹಡಪದ, ಚಂದ್ರುಧಣಿ, ಯಲ್ಲಪ್ಪ ಶಾಸ್ತ್ರಿ, ಸಂಗಯ್ಯತಾತ, ವಿಜಯಕುಮಾರ ಗುತ್ತೇದಾರ, ಶಿವು, ರಮೇಶ ಗಂಟ್ಲಿ, ಶಿವಣ್ಣ ಗೊಬ್ಬಿ, ಧರ್ಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net