ಜಿರ್ಣೋದ್ಧಾರಗೊಂಡ ಬಸವೇಶ್ವರ ದೇವಸ್ಥಾನ, ನೂತನ ಮೂರ್ತಿ ಪ್ರತಿಷ್ಠಾಪನೆ

030820 Maski Main Bazzer Basavanna Temple Innogration
ಮಸ್ಕಿಯ ಮುಖ್ಯ ಬಜಾರದಲ್ಲಿರುವ ಬಸವಣ್ಣ ಗುಡಿಯನ್ನು ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಿದರು.
Published on

ಮಸ್ಕಿ: ಪಟ್ಟಣದ ಮುಖ್ಯ ಬಜಾರದಲ್ಲಿದ್ದ ಬಸವಣ್ಣ ದೇವಸ್ಥಾನವನ್ನು ಜಿರ್ಣೋದ್ಧಾರ ಪೂರ್ಣಗೊಂಡಿದ್ದು, ಸೋಮವಾರ ನೂತನ ಬಸವಣ್ಣ ಶಿಲಾ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಒಂದು ವಾರದಿಂದ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗಾಗಿ ವಿವಿಧ ರೀತಿಯ ಪೂಜಾ ಕೈಂಕರ್ಯ ನಡೆದಿದ್ದವು. ಸೋಮವಾರ ಬೆಳಗ್ಗೆ ನೂತನ ಶಿಲಾ ಮೂರ್ತಿಗೆ ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು.

ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ದೇವಸ್ಥಾನ ಉದ್ಘಾಟಿಸಿದರು. ಒಂದು ವರ್ಷದ ಹಿಂದೆ ದೇವಸ್ಥಾನದ ಜಿರ್ಣೋದ್ಧಾರಕ್ಕಾಗಿ ಪ್ರತಾಪಗೌಡ ಪಾಟೀಲ್ 10 ಲಕ್ಷ ರೂ.ಅನುದಾನ ನೀಡಿದ್ದರು.

ಜಿಪಂ ಮಾಜಿ ಸದಸ್ಯರಾದ ಕೆ.ವೀರನಗೌಡ, ಮಹಾದೇವಪ್ಪಗೌಡ ಪಾಟೀಲ, ಮುಖಂಡರಾದ ಅಂದಾನಪ್ಪ ಗುಂಡಳ್ಳಿ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಮಲ್ಲಪ್ಪ ಕುಡತಿನಿ, ಷಡಕ್ಷರಪ್ಪ ಬಾಳೆಕಾಯಿ, ಚನ್ನವೀರಪ್ಪ ಸೌದ್ರಿ ಹೊಕ್ರಾಣಿ, ಕಸಾಪ ಅಧ್ಯಕ್ಷ ಘನಮಠದಯ್ಯ ಸಾಲಿಮಠ, ಚಂದಯ್ಯ ಅಮರಾವತಿ, ಸುಗಣ್ಣ ಬಾಳೆಕಾಯಿ, ಶ್ರೀಧರ ಬಳ್ಳೊಳ್ಳಿ, ಶಿವಪ್ಪ ಇದ್ದರು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net