

ಮಸ್ಕಿ: ರೈತರು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಬೇಕು. ಇದರಿಂದ ಸಂಘವು ಬೆಳೆಯುತ್ತದೆ ಮತ್ತು ರೈತರಿಗೆ ಸಕಾಲಕ್ಕೆ ಸಾಲವು ಸಿಗುತ್ತದೆ ಎಂದು ಶಾಸಕ ಆರ್.ಬಸನಗೌಡ ಆರ್.ತುರ್ವಿಹಾಳ ಹೇಳಿದರು.
ತಾಲೂಕಿನ ಗುಡದೂರು ಗ್ರಾಮದಲ್ಲಿ ಬುಧವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಸರ್ಕಾರ ರೈತರ ಪರವಾಗಿದ್ದು, ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಸಹಕಾರ ಸಂಘದಿಂದ ರೈತರಿಗೆ ಅನುಕೂಲವಿದ್ದು, ಮುಂದಿನ ದಿನಗಳಲ್ಲಿ ನೂತನ ಹೊಸ ಕಟ್ಟಡ ಪ್ರಾರಂಭವಾಗಲಿದೆ. ಯೂರಿಯಾ ಗೊಬ್ಬರ ಪೂರೈಸುವಲ್ಲಿ ಸರ್ಕಾರ ಬದ್ಧವಿದ್ದು, ಯಾರೂ ಆತಂಕ ಪಡಬಾರದು ಎಂದರು.