ಗಚ್ಚಿನಮಠಕ್ಕೆ ಎಸ್.ಆರ್.ಪಾಟೀಲ್ ಭೇಟಿ

29062021 Maski SR Patil Visit
Published on

ಮಸ್ಕಿ: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ತಾಲೂಕಿನ ವಿವಿಧ ಮಠಗಳಿಗೆ ಮಂಗಳವಾರ ಭೇಟಿ ನೀಡಿ, ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಪಟ್ಟಣದ ಗಚ್ಚಿನಮಠಕ್ಕೆ ಆಗಮಿಸಿದ ಪಾಟೀಲ್ ಶ್ರೀಮಠದ ಮೂಲ ಕರ್ತೃ ಗದ್ದುಗೆಯ ದರ್ಶನ ಪಡೆದರು. ನಂತರ ಮಠದ ಸ್ವಾಮೀಜಿ ಶ್ರೀ ವರರುದ್ರಮುನಿ ಶಿವಾಚಾರ್ಯರನ್ನು ಭೇಟಿ ಮಾಡಿ ಚರ್ಚಿಸಿದರು. ಇದೇ ಸಂದರ್ಭ ಶ್ರೀ ವರರುದ್ರಮುನಿ ಶಿವಾಚಾರ್ಯರು ಪಾಟೀಲರನ್ನು ಸನ್ಮಾನಿಸಿದರು. ಇದಾದ ಬಳಿಕ ತಾಲೂಕಿನ ಸಂತೆಕೆಲ್ಲೂರು ಗ್ರಾಮದ ಕೃಷಿಋಷಿ ಘನಮಠ ಶಿವಯೋಗಿಗಳ ಮಠಕ್ಕೂ ಪಾಟೀಲರು ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net