ಕೆರೆ ತುಂಬಿಸುವಲ್ಲಿ ವಿಫಲ

Untitled design (43)
ಸೋಮಲಾಪುರದ ಅಂಬಾಮಠದಲ್ಲಿ ಸದ್ಗುರು ಸಿದ್ದಾರೂಢರ ಹಾಗೂ ಸದ್ಗುರು ಬಸವಲಿಂಗ ಸ್ವಾಮಿಗಳ ಅಮೃತ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು.
Published on

ಮಸ್ಕಿ: ಕ್ಷೇತ್ರದಲ್ಲಿ ಕುಡಿವ ನೀರಿನ ಅಭಾವ ಸೃಷ್ಟಿಯಾಗಿದೆ. ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ನೀರು ಕೊಡುವಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಡಿವ ನೀರು ಪೂರೈಕೆಗಾಗಿ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸಿದ್ದರೂ ಕ್ಷೇತ್ರದಲ್ಲಿ 18-20 ಕೆರೆಗಳನ್ನು ತುಂಬಿಸುವಲ್ಲಿ ವಿಫಲರಾಗಿದ್ದಾರೆ. ಪಾಮನಕಲ್ಲೂರು ಭಾಗದಲ್ಲಿ ತೀವ್ರ ನೀರಿನ ತೊಂದರೆಯಾಗಿದೆ. ಇರಕಲ್ ಕೆರೆ ತುಂಬಿಸಿಲ್ಲ. ಶಾಸಕರ ಸ್ವಂತ ಗ್ರಾಮ ತುರ್ವಿಹಾಳದ ಕೆರೆ ತುಂಬಿಸಿಕೊಂಡಿಲ್ಲ. ಅಲ್ಲಿನ ಪುರಸಭೆ ಅಧಿಕಾರಿಗೆ ವಿಚಾರಿಸಿದರೆ ಪಂಪ್‌ಸೆಟ್ ಖರೀದಿಗೆ ಹಣ ಇಲ್ಲ ಎನ್ನುತ್ತಾರೆ. ಅಧಿಕಾರಿಗಳ ಮೇಲೆ ಶಾಸಕರ ಹಿಡಿತವಿಲ್ಲ. ಸಕಾಲಕ್ಕೆ ಕೆಡಿಪಿ ಸಭೆ ಮಾಡುತ್ತಿಲ್ಲ. ಕಾಟಚಾರಕ್ಕೆ ಸಭೆಗಳಾಗುತ್ತಿವೆ. ಆರ್.ಬಸನಗೌಡ ತುರ್ವಿಹಾಳ ಶಾಸಕರಾಗಿ ಮೂರು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯ ಮಾಡುವಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ಸಿದ್ದಣ್ಣ ಹೂವಿನಬಾವಿ, ಡಾ.ಬಿ.ಎಚ್.ದಿವಟರ್, ಮಂಡಲ ಅಧ್ಯಕ್ಷ ಶರಣಯ್ಯ ಸೊಪ್ಪಿಮಠ, ಕಾರ್ಯದರ್ಶಿಗಳಾದ ರಮೇಶ ಉದ್ಬಾಳ, ಬಸವರಾಜ ಗುಡಿಹಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net