ಮಸ್ಕಿ ಕ್ಷೇತ್ರದ ಅಭಿವೃದ್ಧಿಗೆ 110 ಕೋಟಿ ರೂ. ಬಿಡುಗಡೆ; ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾಹಿತಿ

Pratapgowda Patil Maski
SL
Published on

ಮಸ್ಕಿ: ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ 110 ಕೋಟಿ ರೂ. ಬಿಡುಗಡೆ ಮಾಡಿದ್ದು, ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ತಿಳಿಸಿದರು.

ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸಂಜೆ ಮಾತನಾಡಿದರು. ಮಸ್ಕಿ ನಾಲಾ ಜಲಾಶಯ ಕಾಲುವೆಗಳ ಕಾಲುವೆಗಳ ಆಧುನಿಕರಣಕ್ಕೆ 52.54 ಕೋಟಿ ರೂ., ತೋರಣದಿನ್ನಿ-ಬ್ಯಾಗವಾಟ ರಸ್ತೆ ಅಭಿವೃದ್ಧಿಗೆ 16 ಕೋಟಿ, ಬಳಗಾನೂರು-ಜಾಲವಾಡಗಿ ರಸ್ತೆ ಅಭಿವೃದ್ಧಿಗೆ 8 ಕೋಟಿ ರೂ., ಮಸ್ಕಿ-ಕವಿತಾಳ ರಸ್ತೆಯ ನಾಗಲದಿನ್ನಿ ಸೇತುವೆ ನಿರ್ಮಾಣಕ್ಕೆ 7.5 ಕೋಟಿ, ಗೂಗೇಬಾಳ ಸೇತುವೆ 7.5 ಕೋಟಿ ರೂ., ತುರುವಿಹಾಳ-ಮಧ್ಯಕ್ಯಾಂಪ್ ರಸ್ತೆಗೆ 6.5 ಕೋಟಿ, ಕೋಳಬಾಳ-ಕುರಕುಂದಾ ರಸ್ತೆಗೆ 3.5 ಕೋಟಿ ರೂ. ಹಾಗೂ ಇತರ ಗ್ರಾಮಗಳ ರಸ್ತೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ಮಂತ್ರಿಯಾಗಲು ಯೋಗ ಇರಬೇಕು: ಮಂತ್ರಿಯಾಗಲು ಎಲ್ಲರಿಗೂ ಸಾಧ್ಯವಾಗಲ್ಲ. ನಾನೂ ಮಂತ್ರಿಯಾಗುತ್ತೇನೆ ಎಂದು ನನಗೂ ಅನಿಸಿರಲಿಲ್ಲ. ಆದರೆ, ಈಗ ಅಂತಹ ಪರಿಸ್ಥಿತಿ ಬಂದಿದೆ. ಮಂತ್ರಿಯಾಗಲು ಯೋಗವಿರಬೇಕು. ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿಗಳು ಯಾರೂ ತಾವು ಮಂತ್ರಿಯಾಗಿಲ್ಲ ಎನ್ನುವ ಕಾರಣಕ್ಕೆ ನನ್ನನ್ನು ಸೋಲಿಸುತ್ತಾರೆ ಎನ್ನುವ ವಿಷಯದ ಮೇಲೆ ನಂಬಿಕೆ ಇಲ್ಲ. ಅಂತಹ ಹೊಟ್ಟೆಕಿಚ್ಚು ಯಾರಿಗೆ ಇಲ್ಲ ಎಂದು ಭಾವಿಸುತ್ತೇನೆ ಎಂದು ಪ್ರತಾಪಗೌಡ ಪಾಟೀಲ್ ತಿಳಿಸಿದರು.

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ 2008ರಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ಆಗ ನಾನು ಗೆದ್ದಿದೆ. ಜನ ಸ್ಥಳೀಯ ಕೆಲಸಗಳು, ಸ್ಥಳೀಯ ಮುಖಂಡರನ್ನು ನೋಡುತ್ತಾರೆ. ಪಕ್ಕದ ಕ್ಷೇತ್ರದವರನ್ನು ನೋಡುವುದಿಲ್ಲ. | ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ, ಮಸ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net