ಕಣ್ಣಿನ ಆಸ್ಪತ್ರೆ ಆರಂಭಕ್ಕೆ ಸಹಕಾರ

180322 Maskii Eye Checkup Camp
ಮಸ್ಕಿಯ ಭ್ರಮರಾಂಭ ದೇವಸ್ಥಾನದಲ್ಲಿ ಲಯನ್ಸ್ ಕ್ಲಬ್‌ನಿಂದ ಆಯೋಜಿಸಿದ್ದ ನೇತ್ರ ತಪಾಸಣೆ ಉಚಿತ ಶಿಬಿರವನ್ನು ಗೋವಾ ವಲಯದ ಎಂ.ಜೆ.ಎಫ್. ಲಯನ್ ಶಶಿಂದ್ರನ್ ನಾಯರ ಶುಕ್ರವಾರ ಉದ್ಘಾಟಿಸಿದರು.
Published on

ಮಸ್ಕಿ: ಪಟ್ಟಣದಲ್ಲಿ ಕಣ್ಣಿನ ಆಸ್ಪತ್ರೆ ಆರಂಭಿಸುವುದಾದರೆ ಲಯನ್ಸ್ ಕ್ಲಬ್ ವತಿಯಿಂದ ಸಹಕಾರ ಕೊಡುವುದಾಗಿ ಗೋವಾ ವಲಯದ ಎಂ.ಜೆ.ಎಫ್. ಲಯನ್‌ನ ಶಶಿಂದ್ರನ್ ನಾಯರ ಭರವಸೆ ನೀಡಿದರು.

ಪಟ್ಟಣದ ಭ್ರಮರಾಂಭ ದೇವಸ್ಥಾನದಲ್ಲಿ ಶುಕ್ರವಾರ ನೇತ್ರ ಚಿಕಿತ್ಸಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. 30 ವರ್ಷಗಳಿಂದ ಪ್ರತಿ ವರ್ಷ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸೆ ಮಾಡಲಾಗುತ್ತಿದೆ. ಈ ಭಾಗದಲ್ಲಿ ಕಣ್ಣಿನ ಆಸ್ಪತ್ರೆಯ ಅವಶ್ಯಕತೆ ಇದ್ದು ಸುಸಜ್ಜಿತ ಆಸ್ಪತ್ರೆ ಆರಂಭಕ್ಕೆ ಅಗತ್ಯ ನೆರವು ಕೊಡಿಸುವುದಾಗಿ ಹೇಳಿದರು.

ಕೊಪ್ಪಳ ಲಯನ್ಸ್ ಕ್ಲಬ್ ಆರ್.ಸಿ. ಶ್ರೀನಿವಾಸ ಗುಪ್ತಾ ಮಾತನಾಡಿ, ಈಗಾಗಲೇ ಕೊಪ್ಪಳದಲ್ಲಿ ಕಣ್ಣಿನ ಆಸ್ಪತ್ರೆ ಪ್ರಾರಂಭಿಸಿದ್ದು ಮುಂಬರುವ ದಿನಗಳಲ್ಲಿ ಮಸ್ಕಿಯಲ್ಲಿ ಆಸ್ಪತ್ರೆ ಆರಂಭಿಸುವಂತೆ ಮನವಿ ಮಾಡಿದರು. ಲಯನ್ ಸದಸ್ಯ, ವಕೀಲ ನಾಗರಾಜ, ವಿವೇಕಾನಂದ ಸೇವಾಶ್ರಮದ ಸುಬ್ಬರಾವ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಟಿಎಚ್‌ಒ ಅಮರೇಶ ಪಾಟೀಲ, ಡಾ.ಬಸವಶ್ರೀ, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್. ದಿವಟರ್, ಪ್ರಕಾಶ ದಾರಿವಾಲ್, ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದಲಿಂಗಯ್ಯ ಸೊಪ್ಪಿಮಠ, ಕಾರ್ಯದರ್ಶಿ ಬಸವಲಿಂಗ ಶಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net